Thursday, June 4, 2026
Homeಅಪರಾಧಪುತ್ತೂರು: ಮಸೀದಿಯಲ್ಲಿ ಎರಡು ತಂಡಗಳ ನಡುವೆ  ಹೊಡೆದಾಟ; ಪ್ರಕರಣ ದಾಖಲು!

ಪುತ್ತೂರು: ಮಸೀದಿಯಲ್ಲಿ ಎರಡು ತಂಡಗಳ ನಡುವೆ  ಹೊಡೆದಾಟ; ಪ್ರಕರಣ ದಾಖಲು!

- Advertisement -
- Advertisement -

ಪುತ್ತೂರು: ಮಸೀದಿಯಲ್ಲಿ ಇತ್ತಂಡಗಳ ನಡುವೆ ಪರಸ್ಪರ ಹೊಡೆದಾಡಿಕೊಂಡು ಮೂರು ಜನ ಆಸ್ಪತ್ರೆಗೆ ದಾಖಲಾದ ಘಟನೆ ಬೆಳ್ಳಾರೆ ಮಸೀದಿಯಲ್ಲಿ ನಡೆದಿದೆ.

ಬೆಳ್ಳಾರೆ ಮಸೀದಿಯ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಫಾರ್ಮ್ ಕೊಡುವ ವಿಷಯದಲ್ಲಿ ತಕರಾರು ಉಂಟಾಗಿ, ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದೆ ಎಂದು ಹೇಳಲಾಗಿದೆ.

ಒಂದು ತಂಡದ ಅಜರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾ್ದರೇ, ಮತ್ತೊಂದು ತಂಡ ಹೈದರಾಲಿ ಮತ್ತು ಆಸಿರ್ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಇತ್ತಂಡದವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!