Friday, June 27, 2025
Homeಕರಾವಳಿಬಂಟ್ವಾಳ: ಎರಡು ತಂಡಗಳ ಮಧ್ಯೆ ಮಾರಾಮಾರಿ, ಇಬ್ಬರ ಬಂಧನ

ಬಂಟ್ವಾಳ: ಎರಡು ತಂಡಗಳ ಮಧ್ಯೆ ಮಾರಾಮಾರಿ, ಇಬ್ಬರ ಬಂಧನ

spot_img
- Advertisement -
- Advertisement -

ಬಂಟ್ವಾಳ: ಎರಡು ತಂಡಗಳ ಮಧ್ಯೆ ಮಾರಾಮಾರಿ ಸಂಭವಿಸಿ ಪ್ರಕರಣ ದಾಖಲಾಗಿರುವ ಘಟನೆ ಬಿ.ಸಿ.ರೋಡಿನ ಪರ್ಲಿಯಾ ಬಳಿಯ ಮದ್ದದಲ್ಲಿ ಎಂಬಲ್ಲಿ ನಡೆದಿದೆ.

ಡಿ. 11ರ ತಡರಾತ್ರಿ 1.30ರ ಸುಮಾರಿಗೆ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದೆ.  ಘಟನೆಗೆ ಸಂಬಂಧಿಸಿ ಎರಡೂ ತಂಡಗಳ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್‌ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ತಂಡ ಮದ್ದ ಮನೆ ನಿವಾಸಿ ಶಾವುಲ್‌ ಹಮೀದ್‌ ಹಾಗೂ ಮತ್ತೊಂದು ತಂಡದ ಹಸೈನಾರ್‌ ತಾಳಿಪಡ್ಪು ಬಂಧಿತ ಆರೋಪಿಗಳು.

ಒಂದು ಕಡೆಯಿಂದ ಶಾವುಲ್‌ ಹಮೀದ್‌ ದೂರು ನೀಡಿ , ತನ್ನ ಮನೆಯವರೆಲ್ಲ ಮಲಗಿರುವ ಸಮಯ ಆರೋಪಿಗಳು ಎರಡು ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅಕ್ರಮ ಪ್ರವೇಶಗೈದಿದು ಮನೆ ಮಂದಿಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಮತ್ತೊಂದು ತಂಡದಿಂದ ತಾಳಿಪಡ್ಪು ನಿವಾಸಿ ಮಹಮ್ಮದ್‌ ಇರ್ಫಾನ್‌ ದೂರು ನೀಡಿದ್ದು, ಬಾಡಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿ ತಮ್ಮ ಕಾರಿಗೆ ಕಲ್ಲು ಬಿಸಾಡಿ ಕಾರಿನ ಗಾಜಿಗೆ ಹಾನಿ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಹೊಡೆದಾಟದ ದೃಶ್ಯ ಸಿಸಿ ಕ್ಯಾಮರಾ ದೃಶ್ಯ ವೈರಲ್‌ ಆಗಿತ್ತು. ಪೊಲೀಸರು 2 ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

- Advertisement -
spot_img

Latest News

error: Content is protected !!