Thursday, June 4, 2026
Homeಕರಾವಳಿಉಡುಪಿಕೋಳಿ ಹಾಗೂ ನವಿಲಿನ ನಡುವಿನ ಕಾಳಗದಲ್ಲಿ ಗೆದ್ದವರ್ಯಾರು ಗೊತ್ತಾ?

ಕೋಳಿ ಹಾಗೂ ನವಿಲಿನ ನಡುವಿನ ಕಾಳಗದಲ್ಲಿ ಗೆದ್ದವರ್ಯಾರು ಗೊತ್ತಾ?

- Advertisement -
- Advertisement -

ಕುಂದಾಪುರ :ಕರಾವಳಿ ಭಾಗದಲ್ಲಿ ಕೋಳಿ ಅಂಕ ಸಿಕ್ಕಾಪಟ್ಟೆ ಫೇಮಸ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಕೋಳಿ ಅಂಕಕ್ಕಾಗಿಯೇ ಮನೆಯಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಕೋಳಿ ಸಾಕುವವರು ಸಾಕಷ್ಟು ಮಂದಿಯಿದ್ದಾರೆ. ಈ ಕೋಳಿಗಳ ರೇಟ್ ಕೂಡ ಅಷ್ಟೇ ಇರುತ್ತೆ. ನೀವೆಲ್ಲಾ ಕೋಳಿ ಅಂಕದಲ್ಲಿ ಹಂಜಗಳ ನಡುವೆ ಫೈಟ್ ನಡೆಯುತ್ತೆ. ಆದರೆ ಕೋಳಿ ಹಾಗೂ ನವಿಲಿನ ಮಧ್ಯೆ ನಡೆದ ಕಾಳಗವನ್ನು ನೀವೆಲ್ಲಾದರೂ ನೋಡಿದ್ದೀರಾ.. ಆದ್ರೆ ಇಂತಹದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಕುಂದಾಪುರ.

ಅಂದ್ಹಾಗೆ ಇಲ್ಲಿ ಸ್ವತಃ ನವಿಲೇ ಕೋಳಿ ಜೊತೆಗೆ ಫೈಟ್ ಗೆ ಇಳಿದಿದೆ. ಕುಂದಾಪುರದಲ್ಲಿ ಮನೆಯೊಂದರ ಮುಂದೆ ಕೋಳಿ ಹಾಗೂ ನವಿಲಿನ ನಡುವೆ ಕಾಳಗ ನಡೆದಿದೆ. ಕಾಳಗ ನೋಡಿ ಜನ ಎಂಜಾಯ್ ಮಾಡಿದ್ರೆ ಇನ್ನು ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ  ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ, ಇನ್ನು ಈ ಕಾಳಗದಲ್ಲಿ ಕೋಳಿಯೇ ಗೆದ್ದಿದ್ದು, ನವಿಲು ಹುಂಜದ ಮುಂದೆ ಮಂಡಿಯೂರಿದೆ. ಇನ್ನು ಹುಂಜ ಹಾಗೂ ನವಿಲಿನ ಮಧ್ಯೆ ಫೈಟ್ ಆಗುತ್ತಿದ್ದರೆ ಪಕ್ಕದಲ್ಲೇ ಇದ್ದ ಹೆಂಟೆಯೊಂದು ಹುಂಜಕ್ಕೆ ಸಪೋರ್ಟ್ ಮಾಡುತ್ತಿದೆ. ಸದ್ಯ ಈ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

https://www.facebook.com/jitendra.kundeshwara/posts/10157761593481872

- Advertisement -

Latest News

error: Content is protected !!