Wednesday, June 24, 2026
HomeWorldಜಮ್ಮು-ಕಾಶ್ಮೀರ ದ ಕಥುವಾ ಜಿಲ್ಲೆಯಲ್ಲಿ ಭೀಕರ ಎನ್‌ಕೌಂಟರ್‌: ಓರ್ವ ಉಗ್ರ ಮೃತ್ಯು

ಜಮ್ಮು-ಕಾಶ್ಮೀರ ದ ಕಥುವಾ ಜಿಲ್ಲೆಯಲ್ಲಿ ಭೀಕರ ಎನ್‌ಕೌಂಟರ್‌: ಓರ್ವ ಉಗ್ರ ಮೃತ್ಯು

- Advertisement -
- Advertisement -

ಶ್ರೀನಗರ: ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಂದು ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಶುಕ್ರವಾರದಂದು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ‘ಉಸ್ಮಾನ್’ ಎಂಬ ಉಗ್ರ ಹತನಾಗಿದ್ದಾನೆ. ಕತುವಾ ಜಿಲ್ಲೆಯ ಬಿಲ್ಲಾವರ್ ಪ್ರದೇಶದ ಪರ್ಹೇಟ‌ರ್ ಎಂಬಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಸೇನೆ ಮತ್ತು ಸಿಆರ್‌ಪಿಎಫ್‌ (CRPF) ಪಡೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿ ಪರ್ಹೇಟರ್‌ ಪ್ರದೇಶವನ್ನು ಸುತ್ತುವರಿದಿದೆ.

ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣದಲ್ಲಿ, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ವಿದೇಶಿ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ, ಎಂದು ತಿಳಿಸಿದ್ದಾರೆ.

ADVERTISEMENTಪ್ರಸ್ತುತ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಐಜಿಪಿ ಜಮ್ಮು ಖಚಿತಪಡಿಸಿದ್ದಾರೆ.

- Advertisement -

Latest News

error: Content is protected !!