Tuesday, June 9, 2026
HomeWorldಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯಾಟ; ವಿಶ್ವಕಪ್ ಕಿರೀಟ ಗೆದ್ದು ಇತಿಹಾಸ ನಿರ್ಮಿಸಿದ ದಿವ್ಯಾ ದೇಶ್‌ಮುಖ್

ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯಾಟ; ವಿಶ್ವಕಪ್ ಕಿರೀಟ ಗೆದ್ದು ಇತಿಹಾಸ ನಿರ್ಮಿಸಿದ ದಿವ್ಯಾ ದೇಶ್‌ಮುಖ್

- Advertisement -
- Advertisement -

ಬತುಮೀ: ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ 19 ವರ್ಷದ ದಿವ್ಯಾ ದೇಶ್‌ಮುಖ್ ಅವರು ಟೈ-ಬ್ರೇಕರ್‌ನಲ್ಲಿ 1.5-0.5 ಅಂಕಗಳಿಂದ ಗೆದ್ದು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.

ಫೈನಲ್‌ ಪಂದ್ಯಾಟದಲ್ಲಿ ದಿವ್ಯಾ ಅವರು ಭಾರತದವರೇ ಅದ ಕೊನೆರು ಹಂಪಿ ಅವರನ್ನು ಸೋಲಿಸಿ ಮಹಿಳಾ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.

ಕೊನೆರು ಹಂಪಿ, ಆರ್. ವೈಶಾಲಿ ಮತ್ತು ಹರಿಕಾ ದ್ರೋಣವಲ್ಲಿ ಅವರ ಹೆಜ್ಜೆಗಳನ್ನು ಅನುಸರಿಸಿದ ದಿವ್ಯಾ ನಾಲ್ಕನೇ ಮಹಿಳಾ ಭಾರತೀಯ ಗ್ರ್ಯಾಂಡ್ ಮಾಸ್ಟರಾದರು. ಇನ್ನು ಈ ಪಂದ್ಯಾಟದಲ್ಲಿ ದಿವ್ಯಾ ದೇಶ್‌ಮುಖ್ ಅವರು  ಮೊದಲಿಗೆ ಫೈನಲ್‌ಗೆ ಪ್ರವೇಶಿಸಿದರು. ಇದರಿಂದಾ ಈ ಪಂದ್ಯದ ಇತಿಹಾಸದಲ್ಲಿ ಭಾರತ ಪರ ಫೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಇನ್ನು ಈ ಟೂರ್ನಿಯ ಪ್ರದರ್ಶನದೊಂದಿಗೆ ಇಬ್ಬರೂ ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಚೆಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!