Saturday, June 6, 2026
Homeಕರಾವಳಿಉಡುಪಿಉಡುಪಿ: ಬೋಟಿನಿಂದ ಕಾಲುಜಾರಿ‌ ನೀರಿಗೆ‌ ಬಿದ್ದು‌‌ ಮೀನುಗಾರ ಸಾವು

ಉಡುಪಿ: ಬೋಟಿನಿಂದ ಕಾಲುಜಾರಿ‌ ನೀರಿಗೆ‌ ಬಿದ್ದು‌‌ ಮೀನುಗಾರ ಸಾವು

- Advertisement -
- Advertisement -

ಉಡುಪಿ; ನಿಲ್ಲಿಸಿದ್ದ ಬೋಟಿನಿಂದ ಕಾಲುಜಾರಿ‌ ನೀರಿಗೆ‌ ಬಿದ್ದು‌‌ ಮೀನುಗಾರ ಸಾವನ್ನಪ್ಪಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆ ತೊಟ್ಟಂ ನಿವಾಸಿ ಪುರಂದರ(42) ಮೃತ ದುರ್ದೈವಿ.

ಪುರಂದರ ಹನುಮ ನಿಧಿ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿ ಬೋಟಿನಿಂದ ಮೀನು ಖಾಲಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ನೀರಿಗೆ ಹಾರಿ ಪುರಂದರ ಅವರನ್ನು ಮೇಲಕ್ಕೆತ್ತಿದ್ದಾರೆ. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಪುರಂದರ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!