Thursday, July 16, 2026
Homeಕರಾವಳಿಕಾರ್ಕಳ: ಗದ್ದೆಯಲ್ಲಿ ಕೃಷಿ ಮಾಡುವಾಗ ಎದೆನೋವು ಕಾಣಿಸಿಕೊಂಡು ವ್ಯಕ್ತಿ ಸಾವು

ಕಾರ್ಕಳ: ಗದ್ದೆಯಲ್ಲಿ ಕೃಷಿ ಮಾಡುವಾಗ ಎದೆನೋವು ಕಾಣಿಸಿಕೊಂಡು ವ್ಯಕ್ತಿ ಸಾವು

- Advertisement -
- Advertisement -

ಕಾರ್ಕಳ: ಗದ್ದೆಯಲ್ಲಿ ಕೃಷಿ ಮಾಡುವಾಗ ಎದೆನೋವು ಕಾಣಿಸಿಕೊಂಡು ಕೃಷಿಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ.

ಮರ್ಣೆ ಗ್ರಾಮದ ಕೈಕಂಬ ನಿವಾಸಿ 56 ವರ್ಷದ ರಾಮಕೃಷ್ಣ ಹೆಗ್ಡೆ ಮೃತ ದುರ್ದೈವಿ. ಇವರು ನಿನ್ನೆ ಕಡ್ತಲದಲ್ಲಿ ತಮ್ಮ ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹಠಾತ್ ಆಗಿ ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ಅವರನ್ನು ಅಜೆಕಾರಿನ ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ರಾಮಕೃಷ್ಣ ಹೆಗ್ಡೆಯವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!