Saturday, November 9, 2024
Homeಉದ್ಯಮಉದ್ಯಮ ವಲಯದಲ್ಲಿ ಸಂಚಲನ : ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು ಖರೀದಿಸಿದ ಫೇಸ್​ಬುಕ್​

ಉದ್ಯಮ ವಲಯದಲ್ಲಿ ಸಂಚಲನ : ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು ಖರೀದಿಸಿದ ಫೇಸ್​ಬುಕ್​

spot_img
- Advertisement -
- Advertisement -

ನವದೆಹಲಿ : ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಅಲೆ ಸೃಷ್ಟಿಸಿರುವ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ತನ್ನ ಶೇ.9.99 ಷೇರನ್ನು ಫೇಸ್​ಬುಕ್​ಗೆ ಮಾರಾಟ ಮಾಡಿದ್ದು, ಈ ಮೂಲಕ ಉದ್ಯಮ ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ. ಜಿಯೋದಿಂದ ಫೇಸ್ ಬುಕ್ ಖರೀದಿಸಿರುವ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ.

ಈ ಒಪ್ಪಂದದ ಬಗ್ಗೆ ಮಾತನಾಡಿರುವ ಆರ್​​ಐಎಲ್​ ಮುಖ್ಯಸ್ಥ ಮುಕೇಶ್​ ಅಂಬಾನಿ, ‘2016ರಲ್ಲಿ ಜಿಯೋ ಲಾಂಚ್​ ಮಾಡಲಾಗಿತ್ತು. ಭಾರತದ ಡಿಜಿಟಲ್​ ಸರ್ವೋದಯದ ಕನಸು ಕಂಡು ನಾವು ಜಿಯೋ ಆರಂಭಿಸಿದ್ದೆವು. ಇಡೀ ಜಗತ್ತು ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್​ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಫೇಸ್​ಬುಕ್​ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್​ ಇಂಡಿಯಾದ ಕನಸು ಕಂಡಿದ್ದಾರೆ. ಸುಲಭ ಜೀವನ ನಡೆಸುವುದು ಮತ್ತು ಸುಲಭವಾಗಿ ಉದ್ಯಮ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು. ಕೊರೋನಾ ವೈರಸ್​ ಕಡಿಮೆ ಆದ ನಂತರ ಭಾರತ ಆರ್ಥಿಕವಾಗಿ ಸಬಲವಾಗಲಿದೆ. ಭಾರತದ ಆರ್ಥಿಕತೆ ಮೇಲೆ ಈ ಒಪ್ಪಂದ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ’ ಎಂದು ಹೇಳಿದರು.

ಇನ್ನು ಈ ಒಪ್ಪಂದದ ಬಗ್ಗೆ ಫೇಸ್​ಬುಕ್​ ಸಂಸ್ಥೆ ಮುಖ್ಯಸ್ಥ ಮಾರ್ಕ್​ ಜುಕರ್​ಬರ್ಗ್​ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!