Thursday, June 4, 2026
Homeಕರಾವಳಿಮಂಗಳೂರು; ಫಾಝಿಲ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು

ಮಂಗಳೂರು; ಫಾಝಿಲ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು

- Advertisement -
- Advertisement -

ಮಂಗಳೂರು; ಫಾಝಿಲ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು ದೊರೆತಿದೆ.ಪ್ರಕರಣದ ಐದನೇ ಆರೋಪಿ ಶ್ರೀನಿವಾಸ್‌ ಎಚ್‌. ಮತ್ತು ಆರೋಪಿಗಳು ಪರಾರಿಯಾಗಲು ಕಾರು ನೀಡಿದ್ದ ಆರೋಪ ಎದುರಿಸುತ್ತಿದ್ದ  ಏಳನೇ ಆರೋಪಿ ಅಜಿತ್‌ ಕ್ರಾಸ್ತಾಗೆ ಹೈಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿದೆ.

2022ರ ಜುಲೈ 28ರಂದು ರಾತ್ರಿ ಸುರತ್ಕಲ್ ಮಾರುಕಟ್ಟೆಯಲ್ಲಿ ಮಂಗಳಪೇಟೆ ನಿವಾಸಿ ಫಾಝಿಲ್‌ ಅವರನ್ನು ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ ದುಷ್ಕರ್ಮಿಗಳ ತಂಡ ತಲವಾರುಗಳಿಂದ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿತ್ತು. ಸಾರ್ವಜನಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ಫಾಝಿಲ್‌ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್‌ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು.

- Advertisement -

Latest News

error: Content is protected !!