Saturday, May 11, 2024
Homeಕರಾವಳಿಫಾಜಿಲ್ ಹತ್ಯೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ

ಫಾಜಿಲ್ ಹತ್ಯೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ

spot_img
- Advertisement -
- Advertisement -

ಕಾರ್ಕಳ: ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆಗೆ ಬಳಸಿದ ಕಾರನ್ನು ಬಾಡಿಗೆ ನೀಡಿದ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಫಾಜಿಲ್ ಹತ್ಯೆಗೆ ಬಳಸಿದ ಕಾರು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

ಇಂದು ಸ್ಥಳೀಯರು ಇನ್ನಾ ಗ್ರಾಮದಲ್ಲಿ ಸ್ಥಳೀಯರು ಕಾರನ್ನು ನೋಡಿ ಮಾಹಿತಿ ನೀಡಿದ್ದಾರೆ. ಈ ಕಾರು ಕಳೆದ ಮೂರು ದಿನದಿಂದ ಇನ್ನಾ ಗ್ರಾಮದ ಉಕ್ಕುಡ ಎಂಬಲ್ಲಿ ನಿಂತಿತ್ತು. ಇಂದು ಮಂಗಳೂರು ಪೊಲೀಸರಿಗೆ ಸ್ಥಳೀಯರು ಮೆಸೇಜ್‌ ಮಾಡಿ ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಇದು ಫಾಜಿಲ್ ಕೊಲೆ ಕೃತ್ಯದಲ್ಲಿ ಬಳಸಿದ ಕಾರು ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು‌ ಭೇಟಿ ನೀಡಿದ್ದಾರೆ. ಕಾಪು ಪೊಲೀಸರು ಕಾರಿಗೆ ಟಾರ್ಪಲ್ ಹಾಕಿದ್ದಾರೆ , FSL ತಜ್ಞರಿಗೆ ಪರಿಶೀಲನೆಗೆ ಅನುಕೂಲವಾಗಲೆಂದು ಟಾರ್ಪಲ್ ಹೊದಿಸಿದ್ದಾರೆ.

- Advertisement -
spot_img

Latest News

error: Content is protected !!