Saturday, June 15, 2024
Homeಕರಾವಳಿಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣ :ನಾಲ್ವರು ಆರೋಪಿಗಳ ಬಂಧನ

ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣ :ನಾಲ್ವರು ಆರೋಪಿಗಳ ಬಂಧನ

spot_img
- Advertisement -
- Advertisement -

ಮಂಗಳೂರು: ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿ ಶೀಟರ್ ಶ್ರೀನಿವಾಸ್ @ ಶೀನು , ಕಟೀಲು ಕಲ್ವಾರ್ ನಿವಾಸಿ ರೌಡಿಶೀಟರ್ ಸುಹಾಸ್ ಶೆಟ್ಟಿ , ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿಶೀಟರ್ ಅಭಿ @ ಅಭಿಷೇಕ್ , ಸುರತ್ಕಲ್ ಕುಲಾಯಿ ನಿವಾಸಿ ಮೋಹನ್(ನೇಪಾಳಿ) ಬಂಧಿತ ಆರೋಪಿಗಳು.

ಕಟೀಲು ಕಲ್ವಾರು ನಿವಾಸಿಯಾಗಿರುವ ರೌಡಿಶೀಟರ್ ಸುಹಾಸ್ ಶೆಟ್ಟಿ ಫೈನಾನ್ಸ್ ರಿಕವರಿ ಕೆಲಸ ಮಾಡುತ್ತಿದ್ದ. ಈತನ ಮೇಲೆ  ಮುಸ್ಲಿಂ ಯುವಕನ ಕೊಲೆ , ಕೊಲೆ ಯತ್ನ ಕೇಸ್ ಇದೆ. ಈತ ಕಟೀಲು ಭಜರಂಗದಳ ಕಾರ್ಯಕರ್ತ ಕೂಡ ಹೌದು. ಕಳೆದ ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.

ಇನ್ನೋರ್ವ ಆರೋಪಿ ಅಭಿ@ಅಭಿಷೇಕ್ ಸುರತ್ಕಲ್ ಕೃಷ್ಣಾಪುರ ನಿವಾಸಿ. ನಿರುದ್ಯೋಗಿಯಾಗಿದ್ದ ಈತನ ವಿರುದ್ಧ ಮುಸ್ಲಿಂ ಯುವಕನ ಕೊಲೆ ಯತ್ನದ ಕೇಸ್ ಇದೆ. ಈತನೂ ಭಜರಂಗದಳ ಕಾರ್ಯಕರ್ತ.

ಮತ್ತೋರ್ವ ಆರೋಪಿ ಸುರತ್ಕಲ್ ಕುಲಾಯಿ ನಿವಾಸಿ ಮೋಹನ್ . ಮೂಲತಃ ನೇಪಾಳಿ. ಕುಟುಂಬ ಸಮೇತ ಸುರತ್ಕಲ್ ಗೆ ಬಂದು ಸ್ವಂತ ಅಂಗಡಿ ಮಾಡಿಕೊಂಡಿದ್ದ. ಅಲ್ಲದೇ ಸ್ವಂತ ಮನೆ ಕೂಡ ಕಟ್ಟಿಕೊಂಡಿದ್ದ. ಭಜರಂಗದಳ ಸದಸ್ಯರ ಜೊತೆ ಗುರುತಿಸಿಕೊಂಡಿದ್ದ.

ಕೃಷ್ಣಾಪುರದ ರೌಡಿ ಶೀಟರ್ ಶ್ರೀನಿವಾಸ್@ ಶೀನು ಫಾಜಿಲ್ ಕೊಲೆ ಮಾಡುವ ತಂಡದ ಕಾರಿನಲ್ಲಿ ಚಾಲಕನಾಗಿದ್ದ. ಈತನ ಮೇಲೆ ಮುಸ್ಲಿಂ ಯುವಕನ ಕೊಲೆ ಯತ್ನ ಕೇಸ್ ಇದೆ. ನಿರುದ್ಯೋಗಿಯಾಗಿದ್ದ ಈತನೂ ಕೂಡ ಭಜರಂಗದಳ ಕಾರ್ಯಕರ್ತ.

ಪ್ರಕರಣ ನಡೆದ ಬಳಿಕ ಮೊದಲು ಪೊಲೀಸರು ಇಯಾನ್ ಕಾರು ನೀಡಿದ್ದ ಮಾಲೀಕ ಅಜಿತ್ ಕ್ರಾಸ್ತಾ ನನ್ನು ಬಂಧಿಸಿದ್ದರು.

- Advertisement -
spot_img

Latest News

error: Content is protected !!