Sunday, May 5, 2024
Homeತಾಜಾ ಸುದ್ದಿಒಡಿಶಾ ದುರಂತದಲ್ಲಿ ಜೀವ ತೆತ್ತ ನೂರಾರು ಮಂದಿಯ ಹೆಣಗಳ ಮಧ್ಯೆ ಜೀವಂತವಿದ್ದ ಮಗನನ್ನು ಕಾಪಾಡಿದ ತಂದೆ...

ಒಡಿಶಾ ದುರಂತದಲ್ಲಿ ಜೀವ ತೆತ್ತ ನೂರಾರು ಮಂದಿಯ ಹೆಣಗಳ ಮಧ್ಯೆ ಜೀವಂತವಿದ್ದ ಮಗನನ್ನು ಕಾಪಾಡಿದ ತಂದೆ ; ಕೇವಲ ದೂರದಿಂದ ಮಗನ ಒಂದು ಕೈ ನೋಡಿ ಆತನನ್ನು ಗುರುತಿಸಿದ ಅಪ್ಪ; ಎಂತಹವರ ಕಣ್ಣನನ್ನು ತೇವಗೊಳಿಸುತ್ತೆ ಈ ಸುದ್ದಿ

spot_img
- Advertisement -
- Advertisement -

ಒಡಿಶಾ ದುರಂತದಲ್ಲಿ ಮೂರಕ್ಕೂ ಹೆಚ್ಚು ಮಂದಿ ಜೀವ ತೆತ್ತಿದ್ದಾರೆ. 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಜೀವ ಕಳೆದುಕೊಂಡ ಮಂದಿಯ ಮೃತದೇಹಗಳ ಮಧ್ಯೆ ಜೀವಂತವಿದ್ದ ಮಗನನ್ನು ಕಾಪಾಡಿದ ತಂದೆಯೊಬ್ಬರ ಪುತ್ರ ಪ್ರೇಮ ಇದೀಗ ದೊಡ್ಡ ಸುದ್ದಿಯಾಗಿದೆ.ಅವರ ಆ ಕಥೆ; ಎಂತಹವರ ಕಣ್ಣನನ್ನು ತೇವಗೊಳಿಸುತ್ತೆ .

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆ ವ್ಯಕ್ತಿಯು ಹೀರೋವಾಗಿದ್ದು. ಆ ಘಟನೆಯ ಬಗ್ಗೆ ಸಲಾಮ್ ಸಂಪೊಲಿ ಎಂಬವರು ಬರೆದುಕೊಂಡಿದ್ದು, ಅವರ ಬರವಣಿಗೆಯನ್ನು ಯಥವತ್ತಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ.

ಹೆಲಾರಾಮ್ ಮಲಿಕ್ ಕೋಲ್ಕತ್ತಾದ ಹೌರಾದಲ್ಲಿ ಒಂದು ಚಿಕ್ಕ ಅಂಗಡಿ ನಡೆಸುತ್ತಿದ್ದಾನೆ.ಮಗ ಬಿಸ್ವಜಿತ್ ನನ್ನು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳೂಹಿಸಿ ಮತ್ತೆ ವಾಪಸ್ ಅಂಗಡಿಗೆ ಬಂದಿದ್ದ. ರೈಲು ಅಪಘಾತಕ್ಕೀಡಾದ ವಿಷಯ ಕೆಲ ಗಂಟೆಗಳ ನಂತರ ಗೊತ್ತಾಯಿತು.ಹೆಲಾರಾಮ್ ಮಗನಿಗೆ ಫೋನ್ ಮಾಡಿದ, ಉತ್ತರವಾಗಿ ಒಂದು ಕ್ಷೀಣ ಧ್ವನಿಯಲ್ಲಿ ನರಳಾಟ ಮಾತ್ರ ಕೇಳಲು ಸಾಧ್ಯವಾಯಿತು!  ಮಗ ಜೀವದಲ್ಲಿ ಇದ್ದಾನೆ ಎಂದು, ತುಂಬಾ ನೋವು ಅನುಭವಿಸುತ್ತಿದ್ದಾನೆ ಎಂದು ಗೊತ್ತಾಯಿತು…

ತಕ್ಷಣವೇ ಒಂದು ನಿರ್ಧಾರ ತೆಗೆದುಕೊಂಡ…ಪರಿಚಿತನಾದ ಆಂಬ್ಯುಲೆನ್ಸ್ ಡ್ರೈವರ್ ಪಾಲೇಶ್ ಪಂಡಿತ್ ನನ್ನು ಕರೆದ, ಜೊತೆಗೆ ಬಾವ ದೀಪಕ್ ದಾಸ್ ನನ್ನು ಕರೆದುಕೊಂಡು 230 ಕಿಲೋಮೀಟರ್ ದೂರದಲ್ಲಿ ನಡೆದ ಅಪಘಾತ ಸ್ಥಳಕ್ಕೆ ಹೊರಟ..ಅಪಘಾತಕ್ಕೆ ಒಳಗಾದವರನ್ನು ಚಿಕಿತ್ಸಿಸಿರುತ್ತಿರುವ ಎಲ್ಲಾ ಅಸ್ಪತ್ರೆಗಳನ್ನು ಏರಿ ಇಳಿದ. ಮಗನನ್ನು ಅಲ್ಲೆಲ್ಲಿಯೂ ಕಾಣಲು ಸಿಗಲಿಲ್ಲ!… ನಿರಾಸೆಯಾಗಿ ವಾಪಸ್ ಹೋಗದೆ ಹುಡುಕಾಟ ಮುಂದುವರಿಸಿದ. ಮೃತದೇಹಗಳನ್ನಿಟ್ಟಿರುವ ಪಕ್ಕದ ಹೈಸ್ಕೂಲ್ ನಲ್ಲಿ ಹೋಗಿ ಒಮ್ಮೆ ನೋಡಿ ಎಂದು ಯಾರೋ ಹೇಳಿದಾಗ ಅಲ್ಲಿಗೆ ಹೊರಟ… ಹೈಸ್ಕೂಲಿನ ಟೆಂಪರರಿ ಮೋರ್ಚರಿಯಲ್ಲಿ ಮೃತದೇಹಗಳನ್ನು ಸಾಲಾಗಿ ಮಲಗಿಸಿರುವುದನ್ನು ಹೊರಗಿನಿಂದ ಕಂಡ.  ಆದರೆ ಒಳಗೆ ಹೋಗಲು ಅನುಮತಿ ಸಿಗಲಿಲ್ಲ…

ಸುಮಾರು ಸಮಯದ ನಂತರ ಹೊರಗೆ ಸೇರಿದ್ದ ಗುಂಪಿನಲ್ಲಿ ಯಾರೋ ಒಬ್ಬ ಮೃತದೇಹ ಒಂದರ ಕೈ ನಡುಗುತ್ತಿರುವುದನ್ನು ಗಮನಿಸಿದ!!! ಅದು ಅಲ್ಲಿ ಒಂದಿಷ್ಟು ಗದ್ದಲಕ್ಕೂ ಕಾರಣವಾಯಿತು…ಗದ್ದಲವನ್ನು ಗಮನಿಸಿದ ಹೆಲಾರಾಮ್ ಒಂದೇ ನೋಟದಲ್ಲಿ ಆ ನಡುಗುತ್ತಿರುವ ಕೈ ತನ್ನ ಮಗನದ್ದು ಎಂದು ಗುರುತಿಸಿದ!!! ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಮಗನನ್ನು ಎತ್ತಿಕೊಂಡು ತಕ್ಷಣ ವೇ ಬಾಲಸೋರಿನ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸ್ವಂತ ರಿಸ್ಕಲ್ಲಿ ಡಿಸ್‌ಚಾರ್ಜ್ ಮಾಡಿಸಿ ಕಲ್ಕತ್ತಾದತ್ತ ಹೊರಟ…

SSKM ಆಸ್ಪತ್ರೆಯಲ್ಲಿ ಬಿಸ್ವಜಿತ್ ನನ್ನು ಒಂದು ಸರ್ಜರಿಗೆ ಒಳಪಡಿಸಲಾಯಿತು, ಇನ್ನು ಕಾಲಿಗೆ ಒಂದು ಸರ್ಜರಿ ಆಗಬೇಕಿದೆ. ಕೈಯ ಹಲವು ಗಾಯಗಳಿಗೆ ಚಿಕಿತ್ಸೆ ನೀಡಿದ್ದಾರೆ. ಬಿಸ್ವಜಿತ್ ಈಗಲೂ ಪ್ರಜ್ನಾಹೀನ ಸ್ಥಿತಿಯಲ್ಲೇ ಇದ್ದಾನೆ!!! ಜೀವಾಪಯದಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಓದಿದ್ರಲ್ವಾ ಹೆಲಾರಾಮ್ ಮಲಿಕ್ ಎಂತಹ ವ್ಯಕ್ತಿ ಅಂತಾ. ಹೆಲಾರಾಮ್ ನ ನಂಬಿಕೆ ಕೊನೆಗೂ ಸುಳ್ಳಾಗಲಿಲ್ಲ. ಮಗ ಜೀವಂತವಾಗಿ ಬರುತ್ತಾನೆ ಎಂಬ ಆತನ ನಂಬಿಕೆಯೇ ಮಗನನ್ನು ಬದುಕಿಸಿದೆ ಅಂದರೆ ಅತಿಶಯೋಕ್ತಿಯಲ್ಲ

- Advertisement -
spot_img

Latest News

error: Content is protected !!