Thursday, June 4, 2026
Homeಕರಾವಳಿಬೆಳ್ತಂಗಡಿ :  ಕ್ಷುಲ್ಲಕ ಕಾರಣಕ್ಕೆ ಅಪ್ಪ ಮಗನ ನಡುವೆ ಗಲಾಟೆ: ಅಪ್ಪನಿಂದಲೇ ಮಗನ ಬರ್ಬರ ಹತ್ಯೆ...

ಬೆಳ್ತಂಗಡಿ :  ಕ್ಷುಲ್ಲಕ ಕಾರಣಕ್ಕೆ ಅಪ್ಪ ಮಗನ ನಡುವೆ ಗಲಾಟೆ: ಅಪ್ಪನಿಂದಲೇ ಮಗನ ಬರ್ಬರ ಹತ್ಯೆ ; ಆರೋಪಿ ಅಪ್ಪ ಅಂದರ್

- Advertisement -
- Advertisement -

ಬೆಳ್ತಂಗಡಿ :ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಅಪ್ಪ ಮಗನ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉಜಿರೆಯಲ್ಲಿ ಆ.29 ರಂದು ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ(75) ಮಲಗಿದ್ದಾಗ ಮಗ ಜಗದೀಶ್ ಅಚಾರಿ(31) ನಡುವೆ ಅ.29 ರಂದು ರಾತ್ರಿ ಗಲಾಟೆ ಮಾಡಿಕೊಂಡಿದ್ದು. ಈ ವೇಳೆ ಮಾತಿಗೆ ಮಾತು ಹೆಚ್ಚಾದಾಗ ಅಪ್ಪ ಕೃಷ್ಣಯ್ಯ ಆಚಾರಿ 1960 ರಲ್ಲಿ ಹೊಸತಾಗಿ ಖರಿದಿ ಮಾಡಿ ತನ್ನ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ. ಘಟನೆ ಬಳಿಕ ಮನೆಯವರು ಸೇರಿ ಜಗದೀಶ್ ನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾವನ್ನಪ್ಪಿದ್ದಾನೆ. ಇನ್ನೂ ಕೊಲೆ ಮಾಡಿದ ಅಪ್ಪ ಕೃಷ್ಣಯ್ಯ ಅಚಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಕೃಷ್ಣಯ್ಯ ಅಚಾರಿಗೆ  ಇಬ್ಬರು ಹೆಣ್ಣು , ಐದು ಗಂಡು ಮಕ್ಕಳು ಇದ್ದಾರೆ.

- Advertisement -

Latest News

error: Content is protected !!