Sunday, June 7, 2026
Homeಕರಾವಳಿಕಾಸರಗೋಡುಕೇರಳದಲ್ಲಿ ಮಗ, ಸೊಸೆ, ಮೊಮ್ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ವೃದ್ಧ

ಕೇರಳದಲ್ಲಿ ಮಗ, ಸೊಸೆ, ಮೊಮ್ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ವೃದ್ಧ

- Advertisement -
- Advertisement -

ಕೇರಳ: ತನ್ನ ಸ್ವಂತ ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ವೃದ್ಧರೊಬ್ಬರು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕೇರಳದ ತೊಡುಪುಳದ ಚೀನಿಕುಜಿಯಲ್ಲಿ ನಡೆದಿದೆ.

ಚೀನಿಕ್ಕುಜಿಯ ಅಲಿಯಕ್ಕುನ್ನೆಲ್‌ನ ಹಮೀದ್ ಎಂಬ 79 ವರ್ಷದ ವ್ಯಕ್ತಿ  ತನ್ನ ಮನೆಗೆ ಹೊರಗಿನಿಂದ ಬೀಗ ಹಾಕಿ, ಮಗ ಹಾಗೂ ಆತನ ಇಡೀ ಕುಟುಂಬವನ್ನು ಸುಟ್ಟು ಹಾಕಿದ್ದಾರೆ. ಮೊಹಮ್ಮದ್ ಫೈಝಲ್ (49), ಅವರ ಪತ್ನಿ ಶೀಬಾ (39), ಪುತ್ರಿಯರಾದ ಮೆಹರು (16) ಮತ್ತು ಅಸ್ನಾ (13) ಮೃತರು.

ಮೊದಲಿಗೆ ಮನೆಯಿಂದ ಯಾರೂ ಹೊರಗೆ ಬರಬಾರದು ಎಂಬ ಕಾರಣಕ್ಕೆ ಮನೆಯ ಹೊರಗೆ ಬಾಗಿಲಿಗೆ ಬೀಗ ಹಾಕಿದ್ದಾರೆ. ಬಳಿಕ ಮನೆಯೊಳಗೆ ನಲ್ಲಿಯಲ್ಲಿ ನೀರು ಬಾರದಂತೆ ಪೈಪ್ ಸಂಪರ್ಕವನ್ನು ಕಟ್ ಮಾಡಿದ್ದಾರೆ. ಬಳಿಕ  ರಾತ್ರಿ ಎಲ್ಲರೂ ಮಲಗಿದ್ದಾಗ ಮಗ ಫೈಝಲ್ ಮಲಗುವ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾರೆ.  ಇದರಿಂದಾಗಿ ವೃದ್ಧನ ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಹೊರ ಬರಲಾರದೇ ಸಾವನ್ನಪ್ಪಿದ್ದಾರೆ.

ಇನ್ನು ಮಗ ಎಚ್ಚರಗೊಂಡು ಸಹಾಯಕ್ಕಾಗಿ ನೆರೆಹೊರೆಯವರಿಗೆ ಕರೆ ಮಾಡಿದರೂ, ಹಮೀದ್ ಮನೆಗೆ ಬಂದವರಿಗೂ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಮನೆಗೆ ಬೆಂಕಿ ಹಚ್ಚಿ ಹೊರಗೆ ನಿಂತಿದ್ದ ಆ ವೃದ್ಧನನ್ನು ಬಳಿಕ ಅಕ್ಕಪಕ್ಕದ ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಸ್ತಿ ವಿವಾದವೇ ಕೊಲೆಗೆ ಕಾರಣ ಎನ್ನಲಾಗಿದೆ.

- Advertisement -

Latest News

error: Content is protected !!