Saturday, June 6, 2026
Homeತಾಜಾ ಸುದ್ದಿವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರು ಅಂದರ್

ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರು ಅಂದರ್

- Advertisement -
- Advertisement -

ಬೆಂಗಳೂರು: ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೂವರನ್ನು ಹರಿದಾಸ್ ಬರೈ (37), ಪರ್ಹಲ್ದಾರ್ ಅಲಿಯಾಸ್ ರಾಕೇಶ್ (32) ಮತ್ತು ರತನ್ ಸಹಾ (52) ಬಂಧಿತರು.

ಬಂಧಿತರಿಂದ 38 ಲಕ್ಷ ಮೌಲ್ಯದ 745 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ಮನೆಗಳನ್ನು ದರೋಡೆ ಮಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಂದಿತ್ತು.

ನಗರದಲ್ಲಿ ಮೊದಲು ಮೋಟಾರು ಬೈಕ್‌ಗಳನ್ನು ಕದಿಯುತ್ತಿದ್ದರು. ನಂತರ ಹಗಲಿನಲ್ಲಿ ಒಂದೆರಡು ದಿನ ಬೀಗ ಹಾಕಿದ ಮನೆಗಳನ್ನು ಹುಡುಕುತ್ತಿದ್ದರು, ದಿನಪತ್ರಿಕೆಗಳು ಮತ್ತು ಹಾಲಿನ ಪ್ಯಾಕೆಟ್‌ಗಳನ್ನು ಬಾಗಿಲಲ್ಲಿ ಬಿದ್ದಿರುವುದನ್ನು ನೋಡಿ, ಅಂತಹ 2-3 ಮನೆಗಳನ್ನು ಆರಿಸಿಕೊಂಡು  ಮತ್ತು ಮಾಲೀಕರು ಮನೆಯಲ್ಲಿಲ್ಲ ಎಂದು ಖಚಿತಪಡಿಸಿಕೊಂಡು ದರೋಡೆ ಮಾಡುತ್ತಿದ್ದರು.

ಇನ್ನು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಬೆಂಗಳೂರಿ ಮಾರಿ ಬಳಿಕ  ಮೂವರು ಆರೋಪಿಗಳು ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ ಮೂವರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.

- Advertisement -

Latest News

error: Content is protected !!