Sunday, June 7, 2026
Homeಕರಾವಳಿಪುತ್ತೂರಿನ ನರಿಮೊಗರಿನಲ್ಲಿ ಫಾರ್ಮ್ ಕೋಳಿಗಳ ಕಳ್ಳತನ

ಪುತ್ತೂರಿನ ನರಿಮೊಗರಿನಲ್ಲಿ ಫಾರ್ಮ್ ಕೋಳಿಗಳ ಕಳ್ಳತನ

- Advertisement -
- Advertisement -

ಪುತ್ತೂರು: ಇಷ್ಟು ದಿನ ಅಂಗಡಿ, ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖದೀಮರು ಇದೀಗ ಕೋಳಿಗಳನ್ನು ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಪುತ್ತೂರಿನ  ನರಿಮೊಗರು ಸಮೀಪದ ಸೇರಾಜೆ ಎಂಬಲ್ಲಿ ಕೋಳಿ ಫಾರ್ಮ್ ಗೆ ಕಳ್ಳರ ತಂಡವೊಂದು ನುಗ್ಗಿ ಕೋಳಿಗಳನ್ನೇ ಕಳ್ಳತನ ಮಾಡಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಳಿ ಫಾರ್ಮ್‍ಗೆ ಅಳವಡಿಸಿದ್ದ ಪ್ಲಾಸ್ಟೀಕ್ ಕೋಟೆಡ್ ನೆಟ್ ತುಂಡರಿಸಿರುವ ರೀತಿಯಲ್ಲಿ ಪತ್ತೆಯಾಗಿದೆ. ಇದು ಕಳ್ಳರ ಕೃತ್ಯವೆಂಬುವ ಶಂಕೆ ವ್ಯಕ್ತವಾಗಿದೆ. ನರಿಮೊಗರು ಸೇರಾಜೆ ಮಾಮರ ಪೌಲ್ಟ್ರೀ ಫಾರ್ಮ್‍ನ ಮಾಲಕ ರವಿರಾಜ್ ಅವರು ಸಂಜೆ ಫಾರ್ಮ್‍ನಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಮಂಗಳೂರಿಗೆ ಹಿಂತಿರುಗಿದ್ದರು. ಬೆಳಿಗ್ಗೆ ಫಾರ್ಮ್‍ಗೆ ಬಂದು ನೋಡಿದಾಗ ಕೋಳಿಗಳ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದ. ಇದಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!