Wednesday, June 3, 2026
Homeಅಪರಾಧಫರಂಗಿಪೇಟೆ ವಿದ್ಯಾರ್ಥಿ ದಿಗಂತ್‌ ಪ್ರಕರಣ; ಬ್ಯಾಗೊಂದರಲ್ಲಿ ಕೆಲವು ಉಡುಪುಗಳನ್ನ ಕೊಂಡು ಹೋಗಿದ್ದ ದಿಗಂತ್‌!

ಫರಂಗಿಪೇಟೆ ವಿದ್ಯಾರ್ಥಿ ದಿಗಂತ್‌ ಪ್ರಕರಣ; ಬ್ಯಾಗೊಂದರಲ್ಲಿ ಕೆಲವು ಉಡುಪುಗಳನ್ನ ಕೊಂಡು ಹೋಗಿದ್ದ ದಿಗಂತ್‌!

- Advertisement -
- Advertisement -

ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಕಿದೆಬೆಟ್ಟಿನ ವಿದ್ಯಾರ್ಥಿ ದಿಗಂತ್‌ ನಾಪತ್ತೆಯಾಗಿ ಕೆಲವು ದಿನಗಳ ಬಳಿಕ ಪತ್ತೆಯಾಗಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆಬೇರೆ ಆಯಾಮಗಳು ಕಂಡು ಬರುತ್ತಿದೆ.

ದಿಗಂತ್ ಫೆ. 25ರಂದು ಮನೆಯಿಂದ ನಾಪತ್ತೆಯಾಗಿದ್ದು, ಮನೆಯಿಂದ ಹೋಗುವಾಗಲೇ ಬ್ಯಾಗೊಂದರಲ್ಲಿ ಕೆಲವು ಉಡುಪುಗಳನ್ನು ಕೊಂಡು ಹೋಗಿದ್ದು ನಂತರದಲ್ಲಿ ಆತ ಶರ್ಟ್‌ಗಳಿದ್ದ ಬ್ಯಾಗ್‌ಗಳನ್ನು  ರೈಲು ಹಳಿಯ ಬಳಿ ಇಟ್ಟಿರುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 

ಇನ್ನು ಈತ ಫರಂಗಿಪೇಟೆ ವ್ಯಾಯಾಮ ಶಾಲೆಯ ಬಳಿ ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆಗ ಆತನ ಕೈಯಲ್ಲಿ ಬ್ಯಾಗ್‌ ಇರಲಿಲ್ಲ. ಆದರೆ ಆತ ಡಿ ಮಾರ್ಟ್‌ ಮಳಿಗೆಯಲ್ಲಿ ಸಿಕ್ಕಿಬಿದ್ದಾಗ ಆತನಲ್ಲಿದ್ದ ಬ್ಯಾಗ್‌ನಲ್ಲಿ ಬಟ್ಟೆಗಳು ಕಂಡು ಬಂದಿದ್ದು, ಪೊಲೀಸರು ವಿಚಾರಿಸಿದಾಗ ಮನೆಯಿಂದಲೇ ಬಟ್ಟೆಗಳನ್ನು ಕೊಂಡು ಹೋಗಿರುವುದು ತಿಳಿಸಿದ್ದಾನೆ. ಇನ್ನು ಈ ಬಗ್ಗೆ ಮನೆಯವರನ್ನು ವಿಚಾರಿಸಿದಾಗ, ಬಟ್ಟೆಗಳನ್ನು ಕೊಂಡು ಹೋಗಿರುವ ಬಗ್ಗೆ ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮನೆ ತೊರೆಯುವಾಗ ಆತನಲ್ಲಿ ಬೇರೆ ಮೊಬೈಲ್‌ ಇದ್ದಿರುವ ಸಾಧ್ಯತೆಯೂ ಹೆಚ್ಚಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಿಗಂತ್ ಉಡುಪಿಯಲ್ಲಿ ಬಿಸ್ಕೆಟ್‌ ಜತೆಗೆ ಚಾಕು, ಸ್ಟಾಪ್ಲೆರ್‌ ಕೂಡ ಖರೀದಿಸಿದ್ದಾನೆ. ಅಷ್ಟೇ ಅಲ್ಲದೆ ಆತನ ಹತ್ತಿರ ಒಂದೆರಡು ಟೋಪಿಗಳು ಕೂಡ ಆತನ ಕೈಯಲ್ಲಿದ್ದವು.

ಪೊಲೀಸರು ಈ ಎಲ್ಲಾ ವಿಚಾರದ ಕುರಿತು ವಿಚಾರಣೆ ನಡೆಸಿ, ಮನೆಗೆ ವಾಪಾಸ್ ಹೋಗುವ ಬಗ್ಗೆ ಪ್ರಸ್ತಾಪಿಸಿದಾಗ ಆತ ಗೊಂದಲದ ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ಈತ ಸದ್ಯಕ್ಕೆ ಬಾಲ ಮಂದಿರದಲ್ಲಿದ್ದು, ಮಾ. 12ರಂದು ಹೈಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

- Advertisement -

Latest News

error: Content is protected !!