Tuesday, June 9, 2026
Homeಕರಾವಳಿಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲು; ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡನೆ

ಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲು; ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡನೆ

- Advertisement -
- Advertisement -

ಮಂಗಳೂರು: ಕಳೆದ ದಿನ ಮಂಗಳೂರಿನ ಮಂಕಿಸ್ಟಾಂಡ್ ಬಳಿ ಚಿಕ್ಕಮಗಳೂರಿನ ಯುವತಿಯನ್ನು ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿ ಲವ್ ಜಿಹಾದ್ ನಿಂದ ರಕ್ಷಣೆ ಮಾಡಲಾಯಿತು. ಆ ಸಂಧರ್ಭದಲ್ಲಿ ಯಾವುದೇ ಗಲಾಟೆ ಹೊಡೆದಾಟ ನಡೆದಿಲ್ಲ. ಆದರೆ ಪೊಲೀಸರು ವಿನಾಕಾರಣ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ, ಅವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಲವಾಗಿ ಖಂಡಿಸುತ್ತಿದೆ.

ದ್ವೇಷ ರಾಜಕೀಯಕ್ಕೆ ಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಮನೋಸ್ಥೈರ್ಯ ಕುಗ್ಗಿಸಲು ಪೊಲೀಸ್ ಇಲಾಖೆಯನ್ನು ದಾಳವಾಗಿ ಉಪಯೋಗಿಸುತ್ತಿರುವ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಇದಾಗಿದ್ದು, ತಕ್ಷಣ ಬಜರಂಗದಳ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸು ಹಿಂಪಡೆಯಬೇಕು ಮತ್ತು ಹಿಂದೂ ಯುವತಿಯನ್ನು ಲವ್ ಜಿಹಾದ್ ಗೆ ಯತ್ನಿಸಿದ ಪಾಂಡೇಶ್ವರದ ನೂರುಲ್ ಅಮೀನ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಂದು ಪೊಲೀಸ್ ಇಲಾಖೆಗೆ ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ್ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!