Wednesday, June 24, 2026
Homeಕರಾವಳಿಮಹಾಎಕ್ಸ್ ಪ್ರೆಸ್ ಸುದ್ದಿಯನ್ನು ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು; ಮಹಾಎಕ್ಸ್ ಪ್ರೆಸ್ ಸುದ್ದಿ ಲಿಂಕ್ ಬಳಸಿ...

ಮಹಾಎಕ್ಸ್ ಪ್ರೆಸ್ ಸುದ್ದಿಯನ್ನು ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು; ಮಹಾಎಕ್ಸ್ ಪ್ರೆಸ್ ಸುದ್ದಿ ಲಿಂಕ್ ಬಳಸಿ ಅಪಪ್ರಚಾರ

- Advertisement -
- Advertisement -

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಸುದ್ದಿ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಬೆಳಗ್ಗೆ ಪ್ರಕಟವಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಇದೇ ಸುದ್ದಿಯನ್ನು ತಿರುಚಿ ಎಲ್ಲೆಡೆ ವೈರಲ್ ಮಾಡಿದ್ದಾರೆ.


ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಮೇಲೆ ದಾಳಿಗೆ ಯತ್ನ, ಶಾಸಕರು ಅಪಾಯದಿಂದ ಜಸ್ಟ್ ಮಿಸ್ ಆಗಿದ್ದು ಹೇಗೆ? ಹೇಗೆ ಎಂಬ ಲಿಂಕ್ ನಲ್ಲಿ ಸುದ್ದಿ ಪ್ರಕಟಿಸಿದ್ದೆವು. ಆದರೆ ಇದೀಗ ಅದೇ ಸುದ್ದಿಯ ಲಿಂಕ್ ಫರಂಗಿಪೇಟೆಯಲ್ಲಿ ನನ್ನ ಕಾರಿಗೆ ಅಡ್ಡಗಟ್ಟಿ ಬೆದರಿಕೆಯೊಡ್ಡಿದ ದುಷ್ಕರ್ಮಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಹರೀಶ್ ಪೂಂಜ ಖಡಕ್ ಎಚ್ಟರಿಕೆ ಎಂದು ಹೆಡ್ ಲೈನ್ ನೀಡಿ ವೈರಲ್ ಮಾಡುತ್ತಿದ್ದಾರೆ. ಆದರೆ ಇದು ಸುಳ್ಳು ಸುದ್ದಿಯಾಗಿದ್ದು ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಿಂದ ಪ್ರಸಾರವಾದ ಸುದ್ದಿಯಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

- Advertisement -

Latest News

error: Content is protected !!