Sunday, June 29, 2025
Homeಕರಾವಳಿಮಂಗಳೂರು: ಆರ್‌ಪಿಸಿ ಆ್ಯಪ್ ನಲ್ಲಿ ನಕಲಿ ಹೂಡಿಕೆ ; ಮನನೊಂದು ಯುವಕ ಆತ್ಮಹತ್ಯೆ

ಮಂಗಳೂರು: ಆರ್‌ಪಿಸಿ ಆ್ಯಪ್ ನಲ್ಲಿ ನಕಲಿ ಹೂಡಿಕೆ ; ಮನನೊಂದು ಯುವಕ ಆತ್ಮಹತ್ಯೆ

spot_img
- Advertisement -
- Advertisement -

ಮಂಗಳೂರು: ಆರ್‌ಪಿಸಿ ಎಂಬ ಆ್ಯಪ್ ನಲ್ಲಿ ನಕಲಿ ಹೂಡಿಕೆ ಮಾಡಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಡುಶೆಡ್ಡೆ ನಿವಾಸಿ ಸೂರ್ಯ (24) ಮೃತ ಯುವಕ.

ಆರ್‌ಪಿಸಿ ಎಂಬ ಆನ್‌ಲೈನ್ ವ್ಯವಹಾರದಲ್ಲಿ ಸೂರ್ಯ ಹೂಡಿಕೆ ಮಾಡಿದ್ದರು. ಇದರಲ್ಲಿ ವಂಚನೆಗೆ ಒಳಗಾಗಿದ್ದು ಅರಿವಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದರು. ಬಳಿಕ ಅವರ ಮೃತದೇಹ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಪತ್ತೆಯಾಗಿದೆ.

ಡಿಸೆಂಬರ್ 25ರಂದು ಸೂರ್ಯ ನಾಪತ್ತೆಯಾಗಿದ್ದ. ಆ ಬಳಿಕ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಆತ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

“RPC” ಎಂಬ ಆ್ಯಪ್‌ನಲ್ಲಿ ಕೇವಲ ವೀಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎಂಬ ವಿಚಾರ ಕೆಲ ತಿಂಗಳಿಂದ ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿತ್ತು. ಮೂಲಗಳ ಪ್ರಕಾರ ಸೂರ್ಯನೂ ಸುಮಾರು 70 ಸಾವಿರಕ್ಕೂ ಅಧಿಕ ಹಣವನ್ನು ಸಾಲ ಪಡೆದು RPC ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ. ಸದ್ಯ ಈ ಕಂಪೆನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿದೇನೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ

- Advertisement -
spot_img

Latest News

error: Content is protected !!