Friday, April 19, 2024
Homeಕರಾವಳಿಕಾಸರಗೋಡುಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶ!..

ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶ!..

spot_img
- Advertisement -
- Advertisement -

ಕಾಸರಗೋಡು : ಇಲ್ಲಿನ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶವೊಂದು ಹರಡುತ್ತಿದ್ದು ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಜಾಗರೂಕತೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ತಲಾ 5 ಸಾವಿರ ರೂ. ಮೌಲ್ಯದ 4 ಅಮೆಝೋನ್ ಈ-ಕಾರ್ಡ್ ಖರೀದಿಸಿ ಎಂಬ ಇ-ಮೇಲ್ ಮಾಹಿತಿ ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ [email protected] ಗೆ ರವಾನಿಸುವಂತೆ ನಕಲಿ ಸಂದೇಶವೊಂದು ಹರಡುತ್ತಿದೆ. ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್ ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಗಿದೆ.

ಈ ಹುಸಿ ಸಂದೇಶವು [email protected] ಎಂಬ ಇ-ಮೇಲ್ ನಿಂದ ರವಾನೆಯಾಗಿದೆ. ಇದು ನಕಲಿ ಎಂಬುದು ತನಿಖೆಯಿಂದ ಖಚಿತಗೊಂಡಿದೆ. ಈ ಬಗ್ಗೆ ಯಾರೂ ಮೋಸ ಹೋಗ ಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!