ನವದೆಹಲಿ: ಆಧಾರ್ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
10 ವರ್ಷಗಳ ಹಿಂದೆ ನೀಡಲಾದ ಆಧಾರ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ಸೆ.14 ಕೊನೆಯ ದಿನವಾಗಿತ್ತು. ಈ ಗಡುವನ್ನು ಇದೀಗ ವಿಸ್ತರಿಸಲಾಗಿದೆ. ಗಡುವು ಮುಗಿದ ಬಳಿಕ ರೂ 50 ಹಣ ಪಾವತಿಸಿ ಆಧಾರ್ ಕಾರ್ಡ್ ನವೀಕರಣ ಮಾಡಬೇಕಾಗುತ್ತದೆ.
ಇನ್ನು UIDAI ಈ ಕುರಿತಂತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ ಲಕ್ಷಾಂತರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಪ್ರಯೋಜನವಾಗುವಂತೆ ಉಚಿತ ಆನ್‌ಲೈನ್ ಡಾಕ್ಯುಮೆಂಟ್ ಅಪ್‌ಲೋಡ್ ಸೌಲಭ್ಯವನ್ನು 2024ರ ಡಿ.14ರವರೆಗೆ ವಿಸ್ತರಿಸಿದೆ. ಈ ಉಚಿತ ಸೇವೆಯು #myAadhaar ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ’ ಎಂದು ಬರೆದುಕೊಂಡಿದೆ.
ಆಧಾರ್ ಕಾರ್ಡ್‌ನಲ್ಲಿ ಇತರ ಬದಲಾವಣೆಗಳನ್ನೂ ಬಯೋಮೆಟ್ರಿಕ್ಸ್ ಹೊರತುಪಡಿಸಿ ಆನ್‌ಲೈನ್‌ನಲ್ಲಿ ಮಾಡಬಹುದು. ಹೆಚ್ಚಿನ ಸಹಾಯಕ್ಕಾಗಿ ನೀವು ಹತ್ತಿರದ UIDAI ಕೇಂದ್ರ/ಆಧಾರ್ ಸೇವಾ ಕೇಂದ್ರವನ್ನು ಸಹ ಭೇಟಿ ಮಾಡಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಆನ್‌ಲೈನ್ ಆಧಾರ್ ನವೀಕರಣ ವಿಧಾನ:
- ಅಧಿಕೃತ UIDAI ವೆಬ್‌ಸೈಟ್‌ಗೆ (myaadhaar.uidai.gov.in) , ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ. ಸೈಟ್ ಅನ್ನು ನ್ಯಾವಿಗೇಟ್ ಮಾಡಲು ನಿಮ್ಮ ಆದ್ಯತೆಯ ಭಾಷೆಯನ್ನು ನೀವು ಆಯ್ಕೆ ಮಾಡಬಹುದು.
- ನಿಮ್ಮ ಪ್ರಸ್ತುತ ಬಯೋಮೆಟ್ರಿಕ್ ಮತ್ತು ಇತರ ವಿವರಗಳನ್ನು ವೀಕ್ಷಿಸಲು ‘ಆಧಾರ್ ಅಪ್‌ಡೇಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ವಿವರಗಳು ಸರಿಯಾಗಿದ್ದರೆ, ಮಾಹಿತಿ ಸರಿಯಾಗಿದೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಬದಲಾವಣೆಗಾಗಿ ವಿನಂತಿಯನ್ನು ಸಲ್ಲಿಸಿ.