Tuesday, July 2, 2024
Homeತಾಜಾ ಸುದ್ದಿಮೊದಲ ಹೆಂಡತಿ ಅನುಮತಿ ಪಡೆದು 66ನೇ ವಯಸ್ಸಲ್ಲಿ ಎರಡನೇ ಮದುವೆಯಾದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

ಮೊದಲ ಹೆಂಡತಿ ಅನುಮತಿ ಪಡೆದು 66ನೇ ವಯಸ್ಸಲ್ಲಿ ಎರಡನೇ ಮದುವೆಯಾದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

spot_img
- Advertisement -
- Advertisement -

ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಅರುಣ್ ಲಾಲ್ ತಮ್ಮಬಹುಕಾಲದ ಗೆಳತಿ ಬುಲ್ ಬುಲ್ ಸಹಾ ಅವರನ್ನು ಮದುವೆಯಾಗಿದ್ದಾರೆ.


ಅರುಣ್ ಲಾಲ್ (66) ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ. ಮೇ 2ರಂದು ಶಿಕ್ಷಕಿ ಬುಲ್ ಬುಲ್ ಸಹಾ (38) ಅವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವರದಿಗಳ ಪ್ರಕಾರ, ಲಾಲ್ ಮತ್ತು ಸಹಾ ಬಹುಕಾಲದಿಂದ ಸಂಬಂಧ ಹೊಂದಿದ್ದರು. ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.


ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಲಾಲ್ ವಾಸಿಸುತ್ತಿದ್ದಾರೆ.ಲಾಲ್ ಅವರ ಮುದುವೆಯ ಆಮಂತ್ರಣ ಪತ್ರಿಕೆಯ ಚಿತ್ರವೂ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಅರುಣ್ ಮತ್ತು ಸಹಾ ಅವರು ಮುಂದಿನ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಪೀರೈಸ್ ಇನ್ ಎಸ್‌ಪ್ಲೇನೇಡ್‌ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಅರುಣ್ ಲಾಲ್ ಅವರು ಭಾರತಕ್ಕಾಗಿ ಒಟ್ಟು 29 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 850 ರನ್‌ಗಳನ್ನು ಗಳಿಸಿದ್ದಾರೆ ಮತ್ತು 7 ವಿಕೆಟ್‌ಗಳನ್ನು ಪಡೆದಿದ್ದಾರೆ.

- Advertisement -
spot_img

Latest News

error: Content is protected !!