Thursday, May 16, 2024
Homeಕರಾವಳಿಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯೂ ಬಿಜೆಪಿ ಪಕ್ಷದ ಮನೆಯಾಗಬೇಕು; ಶಾಸಕ ರಾಜೇಶ್ ನಾಯ್ಕ್

ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯೂ ಬಿಜೆಪಿ ಪಕ್ಷದ ಮನೆಯಾಗಬೇಕು; ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ಗಡಿಭಾಗದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಕಾರ್ಯಕರ್ತರು ಸಂಘಟಾನಾತ್ಮಕ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಬಿಜೆಪಿ ಬೂತ್ ಅಧ್ಯಕ್ಷರುಗಳ ಮನೆ ಭೇಟಿ ಮಾಡಿ ನಾಮಫಲಕ ಅನಾವರಣ ಮಾಡಿ, ಗೌರವ ನೀಡಿ ಬಳಿಕ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯೂ ಬಿಜೆಪಿ ಪಕ್ಷದ ಮನೆಯಾಗಬೇಕು ಆ ನಿಟ್ಟಿನಲ್ಲಿ ಕಾರ್ಯಕರ್ತರ ನೇತೃತ್ವದಲ್ಲಿ ಗ್ರಾಮ ಗ್ರಾಮದಲ್ಲಿ ಕೆಲಸ ಕಾರ್ಯಗಳು ನಡೆಯಬೇಕು ಎಂದರು.

ಹಿರಿಯರ ಹೋರಾಟ ತ್ಯಾಗ ಬಲಿದಾನದ ಫಲವಾಗಿ ಬಿಜೆಪಿ ಪಕ್ಷ ಸಂಘಟನಾತ್ಮಕ ವಾಗಿ ಬೆಳೆದು ಗ್ರಾಮ ಪಂಚಾಯತ್ ನಿಂದ ದಿಲ್ಲಿವರೆಗೆ ಅಧಿಕಾರಕ್ಕೆ ಬಂದಿದೆ. ಯಾವುದೇ ಗೊಂದಲವಿಲ್ಲದೆ ಆಯ್ಯೋಧೈಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಬಿಜೆಪಿಗೆ ನೀಡಿದ ಪ್ರತಿಯೊಂದು ಮತವೇ ಕಾರಣ ಎಂದು ಅವರು ಹೇಳಿದರು.

ಕರೋಪಾಡಿ ಗ್ರಾ.ಪಂ.ವ್ಯಾಪ್ತಿಯ ಆನೆಕಲ್ಲು ಬೂತ್ ಸಂಖ್ಯೆ 235ರ ಅಧ್ಯಕ್ಷ ಗಣಪತಿ ಭಟ್, ಬೂತ್ ಸಂಖ್ಯೆ 236 ರ ಅಧ್ಯಕ್ಷ ಯೋಗೀಶ್ ಮೂಲ್ಯ, ಬೂತ್ ಸಂಖ್ಯೆ 237 ರ ಅಧ್ಯಕ್ಷ ಆಶ್ಚಥ್ ಶೆಟ್ಟಿ, ಬೂತ್ ಸಂಖ್ಯೆ 238 ರ ಅಧ್ಯಕ್ಷ ಜಯರಾಮ ನಾಯಕ್, ಬೂತ್ ಸಂಖ್ಯೆ 239 ರ ಅಧ್ಯಕ್ಷ ಧರ್ಮೇಂದ್ರ ಓಡಿಯೂರು, ಬೂತ್ ಸಂಖ್ಯೆ 240 ರ ಅಧ್ಯಕ್ಷ ಶಶಾಂಕ್ ಭಟ್ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೇತ್ರತ್ವದ ಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ತಂಡ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮಾತನಾಡಿ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೂಲಕ ಮಾದರಿ ಶಾಸಕರಾಗಿ ರಾಜೇಶ್ ನಾಯ್ಕ್ ಅವರ ಹೆಸರು ಮಿಂಚುತ್ತಿದೆ. ಶಾಸಕರ ಅಭಿವೃದ್ಧಿ ಜೊತೆ ಪಕ್ಷ ಸಂಘಟನೆಗೆ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.



ಮತ್ತೊಮ್ಮೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಆಯ್ಕೆ ಮೂಲಕ ಶಾಂತಿಯುತ ಮಾದರಿ ಬಂಟ್ವಾಳಕ್ಕೆ ಪ್ರತಿಯೊಬ್ಬರೂ ಬಿಜೆಪಿ ಗೆ ಮತ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ನಗರ ನೈರ್ಮಲ್ಯ ನಿಗಮ ಸದಸ್ಯೆ ಸುಲೋಚನ ಜಿ‌.ಕೆ ಭಟ್, ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಕೊಳ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಪ್ರಮುಖ ರಾದ ಲೋಹಿತ್, ಅರವಿಂದ ರೈ, ಅಭಿಷೇಕ್ ರೈ, ವಿಶ್ವನಾಥ್ ಪೂಜಾರಿ ಕಟ್ಟತ್ತಿಲ, ರಾಮನಾಯ್ಕ್, ಆದರ್ಶ್ , ಗಣೇಶ ಮಂಚಿ, ಉದಯರಮಣ, ರಾಮಚಂದ್ರ ಶೆಣೈ, ಪ್ರವೀಣ್ ಬೆಡಗುಡ್ಡೆ, ರಘುನಾಥ್ ಶೆಟ್ಟಿ ಪಟ್ಲ , ವಿನೋದ್ ಶೆಟ್ಟಿ ಪಟ್ಲ, ವಿದ್ಯೇಶ್ ರೈ, ಶ್ರೀ ನಾಥ್ ನಾಯ್ಗ್, ಶಶಿಕಿರಣ್ ಅಣೆಯಾಲ ಗುತ್ತು, ಲಕ್ಷಣ್ ಮಾಂಬಾಡಿ, ಪದ್ಮನಾಭ ಮುಗುಳಿ, ನವೀನ್ ಶಾರದಕೋಡಿ, ರವೀಂದ್ರ ಓಡಿಯೂರು, ಪ್ರಶಾಂತ್ ಬೇಡ ಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

ಮನವಿಗಳಿಗೆ ಸ್ಥಳದಲ್ಲೇ ಶಾಸಕರ ಸ್ಪಂದನೆ

ನಾಮಫಲಕ ಅನಾವರಣ ಕಾರ್ಯಕ್ರಮದ ವೇಳೆ ಗ್ರಾಮಸ್ಥರು ಶಾಸಕರಿಗೆ ಗ್ರಾಮದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಸ್ಥಳದಲ್ಲಿ ಯೇ ನಡೆಯಿತು.

ಗ್ರಾಮದಲ್ಲಿ ರಸ್ತೆ , ಕಿಂಡಿ ಅಣೆಕಟ್ಟು , ತಡೆಗೋಡೆ, ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸೇರಿದಂತೆ ಅನೇಕ ಮನವಿಗಳನ್ನು ಈ ಸಂದರ್ಭದಲ್ಲಿ ಸ್ವೀಕರಿಸಿದರು.

- Advertisement -
spot_img

Latest News

error: Content is protected !!