Thursday, July 3, 2025
Homeತಾಜಾ ಸುದ್ದಿ'ಎಂಡೋಸಲ್ಫಾನ್' ಸಂಕಷ್ಟದಿಂದ ನೊಂದ ಪೋಷಕರು- ಪುತ್ತೂರಿನ ಬಾಲಕನ ಚಿಕಿತ್ಸೆಗೆ ಎದುರಾಗಿದೆ ಹಣದ ಕೊರತೆ

‘ಎಂಡೋಸಲ್ಫಾನ್’ ಸಂಕಷ್ಟದಿಂದ ನೊಂದ ಪೋಷಕರು- ಪುತ್ತೂರಿನ ಬಾಲಕನ ಚಿಕಿತ್ಸೆಗೆ ಎದುರಾಗಿದೆ ಹಣದ ಕೊರತೆ

spot_img
- Advertisement -
- Advertisement -

ಪುತ್ತೂರು:ಇಲ್ಲಿನ ಬಲ್ನಾಡು ಕೃಷ್ಣಪ್ಪ ಗೌಡರ ಪುತ್ರ ಗಗನ್​ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಆರೋಗ್ಯಸಮಸ್ಯೆ ಎದುರಿಸುತ್ತಿದ್ದಾನೆ. ಈ ಬಾಲಕ ಹುಟ್ಟಿ 49 ದಿನವಾಗುತ್ತಲೇ ಅಸ್ತಮಾ ಕಾಯಿಲೆಯಿಂದ ಬಳಲಲಾರಂಭಿಸಿದ್ದ ಗಗನ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಗಗನ್ ಮಧುಮೇಹ ಕಾಯಿಲೆಗೂ ತುತ್ತಾಗಿದ್ದ ಆದರೆ ಈಗ ದಿನಕ್ಕೆ ಮೂರು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾನೆ.

20 ವರ್ಷಗಳ ಹಿಂದೆ ಬಲ್ನಾಡು ಪರಿಸರದಲ್ಲಿ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಕ್ರಿಮಿನಾಶಕವನ್ನ ಸಿಂಪಡಿಸಲಾಗಿತ್ತು. ಇದರ ದುಷ್ಪರಿಣಾಮವಾಗಿ ಇದೀಗ 9 ವರ್ಷ ಪ್ರಾಯದ ಗಗನ್​ ನರಳಾಡುತ್ತಿದ್ದಾನೆ.ಎಂಡೋ (ಸಲ್ಫಾನ್) ಸಂತ್ರಸ್ತರ ಪಟ್ಟಿಗೆಆರೋಗ್ಯ ಇಲಾಖೆ ಗಗನ್ ನನ್ನು ಸೇರಿಸಿಕೊಂಡಿದ್ದು, ಇಲಾಖೆಯಿಂದ ವಿತರಣೆಯಾಗುವ ನೀಲಿ ಕಾರ್ಡನ್ನು ಕೂಡಾ ನೀಡಿದೆ. ಆದರೆ ಈ ಕಾರ್ಡ್ ಈತನಿಗೆ ಯಾವುದೇ ಸೌಲಭ್ಯನೀಡಿಲ್ಲ.

ಗಗನ್ ತಂದೆ ಕೃಷ್ಣಪ್ಪ ಗೌಡ ಕೂಲಿ ಕಾರ್ಮಿಕರಾಗಿದ್ದು ಮಗನ ಆರೋಗ್ಯ ವೆಚ್ಚಕ್ಕಾಗಿ ಹಲವು ಗಣ್ಯರನ್ನು ಭೀತಿಮಾಡಿ ಸಹಾಯಸಿಗಾದೆ ಸುಮ್ಮನಾಗಿದ್ದಾರೆ. ಅಲ್ಲದೆ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಮಗನ ಚಿಕಿತ್ಸೆಗೆ ಹಣ ಒದಗಿಸಲಾಗದ ಕೃಷ್ಣಪ್ಪ ಗೌಡ ಇದೀಗ ಬೀದಿ ಬೀದಿ ಅಲೆದು ಹಣ ಒಟ್ಟುಗೂಡಿಸಲು ತೀರ್ಮಾನಿಸಿದ್ದು, ಇವರ ಪರಿಸ್ಥಿತಿ ಎಂಥವರಿಗೂ ಮರುಕ ತರುವಂತಿದೆ. ಈವರೆಗೆ ಯಾವುದೇ ನೆರವು ಲಭ್ಯವಾದ ಕಾರಣ ಕೃಷ್ಣಪ್ಪ ಗೌಡ ಈ ತೀರ್ಮಾನಕ್ಕೆ ಬಂದಿದ್ದಾರೆ.

ಎಂಡೋ ಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ 25 ಶೇಕಡಾ ಸಂತ್ರಸ್ತನಾಗಿರುವ ಗಗನ್​ಗೆ ಆರೋಗ್ಯ ಇಲಾಖೆ ಉಚಿತ ಚಿಕಿತ್ಸೆ ಪಡೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಸಮರ್ಪಕ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.

- Advertisement -
spot_img

Latest News

error: Content is protected !!