Thursday, May 16, 2024
Homeಕರಾವಳಿರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿ ಸಮಾರೋಪ

ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿ ಸಮಾರೋಪ

spot_img
- Advertisement -
- Advertisement -

ಉಜಿರೆ : ಬದುಕಿನಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಿ, ಫ್ಯಾಷನ್ ಯುಗದಲ್ಲಿ ಹೊಸತನಕ್ಕೆ ಉತ್ತಮ ಅವಕಾಶ ಇದೆ, ನಿಮ್ಮ ಕೆಲಸದಲ್ಲಿ ಹೊಸತನಕ್ಕೆ ಹೆಚ್ಚು ಆದ್ಯತೆ ಇರಲಿ, ಗ್ರಾಹಕರು ಅಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಿ ಕೊಡುವಂತಹ ಪ್ರಯತ್ನ ಮಾಡಿ, ಸಾಧನೆಯ ಮೂಲಕ ನಿಮ್ಮನ್ನು ಗುರುತಿಸಿಕೊಳ್ಳಿ, ರುಡ್ಸೆಟ್ ಸಂಸ್ಥೆಯು ಏನೂ ಪ್ರತಿಫಲ ಅಪೇಕ್ಷೆ ಇಲ್ಲದೆ, ಯುವ ಜನತೆಯು ಆರ್ಥಿಕ ಸಬಲರಾಗುವ ಉದ್ದೇಶದಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಈ ಸಂಸ್ಥೆಯಲ್ಲಿ ಪಡೆದ ಈ ತರಬೇತಿಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಂದು ಧೀಮತಿ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ ಸೋನಿಯಾವರ್ಮರವರು ಅಭಿಪ್ರಾಯ ಪಟ್ಟರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಆಧುನಿಕ ಯುಗದಲ್ಲಿ ಎಂಬ್ರಾಯ್ಡರಿ ಹೆಚ್ಚು ಬೇಡಿಕೆ ಇರುವಂತಹ ಉದ್ಯೋಗ ಕ್ಷೇತ್ರವಾಗಿದ್ದು, ಮಹಿಳೆಯರು ಮನೆಯಲ್ಲೇ ಸ್ವ ಉದ್ಯೋಗ ಪ್ರಾರಂಭಿಸಿ, ಉತ್ತಮ ಆದಾಯ ಗಳಿಸಲು ಅವಕಾಶ ಇದೆ.

ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರ ರವರು ಅದ್ಯಕ್ಷ ಸ್ಥಾನ ವಹಿಸಿದ್ದರು, ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್ ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯರವರು ಕಾರ್ಯಕ್ರಮ ನಿರ್ವಹಿಸಿದರೆ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. 35 ಜನ ಶಿಬಿರಾರ್ಥಿಗಳು 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!