Thursday, June 4, 2026
Homeತಾಜಾ ಸುದ್ದಿವಿದ್ಯುತ್ ತಂತಿ ತಗುಲಿ ಎರಡು ಆನೆಗಳು ಸಾವು

ವಿದ್ಯುತ್ ತಂತಿ ತಗುಲಿ ಎರಡು ಆನೆಗಳು ಸಾವು

- Advertisement -
- Advertisement -

ಶಿವಮೊಗ್ಗ: ಜಮೀನಿಗೆ ಪ್ರಾಣಿಗಳ ರಕ್ಷಣೆಗಾಗಿ ಹಾಕಿದ್ದಂತ ವಿದ್ಯುತ್ ತಂತಿ ಬೇಲಿಗೆ ಎರಡು ಆನೆಗಳು ಸಾವನ್ನಪ್ಪಿರೋ ಘಟನೆ ಇಂದು ಆಯನೂರು ಸಮೀಪ ನಡೆದಿದೆ.

ಇಂದು ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಶೆಟ್ಟಿಹಳ್ಳಿ ಬಳಿಯಲ್ಲಿನ ರೈತನೊಬ್ಬ ಮೆಕ್ಕೆಜೋಳ ರಕ್ಷಣೆಗಾಗಿ ಹಾಕಿದ್ದಂತ ತಂತಿ ಬೇಲಿಗೆ, ಕಾಡಿನಿಂದ ಆಹಾರ ಅರಸಿ ಬಂದ ಎರಡು ಗಂಡು ಆನೆಗಳು ಸಿಲುಕಿ ಸಾವನ್ನಪ್ಪಿವೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ಎರಡು ಗಂಡು ಆನೆಗಳು 20, 28 ವರ್ಷಗಳದ್ದಾಗಿ ಎನ್ನಲಾಗಿದೆ.

- Advertisement -

Latest News

error: Content is protected !!