Sunday, June 14, 2026
Homeತಾಜಾ ಸುದ್ದಿಕೇರಳದಲ್ಲಿ ನವಜೋಡಿಯ ಫೋಟೋ ಶೂಟ್ ವೇಳೆ ಕೆರಳಿದ ಆನೆ; ಮುಂದೇನಾಯ್ತು ಗೊತ್ತಾ?

ಕೇರಳದಲ್ಲಿ ನವಜೋಡಿಯ ಫೋಟೋ ಶೂಟ್ ವೇಳೆ ಕೆರಳಿದ ಆನೆ; ಮುಂದೇನಾಯ್ತು ಗೊತ್ತಾ?

- Advertisement -
- Advertisement -

ಕೇರಳ: ದೇವರನಾಡಿನಲ್ಲಿ ನವ ಜೋಡಿಯೊಂದು ಪೋಟೋ ಶೂಟ್  ಮಾಡುತ್ತಿದ್ದ ವೇಳೆ ಆನೆಯೊಂದು ಕೆರಳಿ ಅಲ್ಲಿದ್ದ ವ್ಯಕ್ತಿಯೊಬ್ಬನ್ನು ಹಿಡಿದು ಎಳೆದು ಬಿಳಿಸಿದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮದುವೆ ಪೋಟೋಶೂಟ್ ಸಂದರ್ಭ ಆನೆಯೊಂದು ದೇವಸ್ಥಾನದ ಆವರಣದಲ್ಲಿ ನಿಂತಿತ್ತು, ಜೋಡಿ ಪೋಟೋ ತೆಗೆಯುತ್ತಿದ್ದಂತೆ ಆನೆ ತಿರುಗಿ ಪಕ್ಕದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಹಿಡಿದು ಎಸೆದಿದೆ.

ಆನೆ ಕೆರಳುತ್ತಿದ್ದಂತೆ ನವಜೋಡಿ ಹಾಗೂ ಅಲ್ಲಿ ನೆರೆದಿದ್ದ ಭಕ್ತರು ಓಡಿ ಹೋಗಿದ್ದಾರೆ. ಮಾವುತ ಆನೆಯನ್ನು ನಿಯಂತ್ರಿಸಿದರಿಂದ, ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ಕೇವಲ ಗಾಯಗೊಂಡು ಬಚಾವಾಗಿದ್ದಾರೆ. ಈ ದೃಶ್ಯವನ್ನು ನವಜೋಡಿಗೆ ಪೋಟೋಶೂಟ್‌ ಮಾಡುತ್ತಿದ್ದ ಪೋಟೋಗ್ರಾಫ‌ರ್‌ ಸೆರೆಹಿಡಿದಿದ್ದಾನೆ.

- Advertisement -

Latest News

error: Content is protected !!