Wednesday, June 24, 2026
Homeಉದ್ಯಮವಿದ್ಯುತ್ ದರ ಮತ್ತೆ ಏರಿಕೆ; ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ

ವಿದ್ಯುತ್ ದರ ಮತ್ತೆ ಏರಿಕೆ; ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ

- Advertisement -
- Advertisement -

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ತಗುಲಿದೆ. ಕೆಇಆರ್‌ಸಿಯು ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ.

ಕೆಇಆರ್‌ಸಿಯ ದರ ಏರಿಕೆ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಎಲ್‌ಟಿ ಖಾಸಗಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ 2025-26 ಆರ್ಥಿಕ ವರ್ಷಕ್ಕೆ ಪ್ರತಿ ಯೂನಿಟ್‌ಗೆ 50 ಪೈಸೆ ಕಡಿತ ಮಾಡಿದ್ದು, ಮನೆ ಬಳಕೆಯ ವಿದ್ಯುತ್‌ಗೆ 2025-26ರಲ್ಲಿ 10 ಪೈಸೆ ಹಾಗೂ 2027-28 ಕ್ಕೆ 5 ಪೈಸೆ ಕಡಿತವಾಗಲಿದೆ. ಹೆಚ್‌ಟಿ ವಾಣಿಜ್ಯದಲ್ಲಿ ಮಾಲ್ ಹಾಗೂ 5ಸ್ಟಾರ್ ಹೋಟೆಲ್‌ಗಳಿಗೆ ಪ್ರತಿ ಯೂನಿಟ್‌ನಲ್ಲಿ 205 ಪೈಸೆಗಳಷ್ಟು ಕಡಿತವಾಗಲಿದೆ. ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಕಡಿಮೆ ಮಾಡಿ ನಿಗದಿತ ಶುಲ್ಕ ಏರಿಸಿ ಕೆಇಆರ್‌ಸಿ ಶಾಕ್‌ ಕೊಟ್ಟಿದೆ. 120 ರೂ.ನಿಂದ 145 ರೂ.ಗೆ ನಿಗದಿತ ಶುಲ್ಕ ಜಿಗಿದಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ನಿಗದಿತ ಚಾರ್ಜ್ ದರ ಏರಿಕೆಯಾಗಿದೆ.

- Advertisement -

Latest News

error: Content is protected !!