Thursday, June 4, 2026
Homeಕರಾವಳಿಬೆಳ್ತಂಗಡಿ: ವಿಧ್ಯುತ್ ಅವಘಡದಲ್ಲಿ ತಾಯಿ, ಮಗು ದಾರುಣ ಸಾವು

ಬೆಳ್ತಂಗಡಿ: ವಿಧ್ಯುತ್ ಅವಘಡದಲ್ಲಿ ತಾಯಿ, ಮಗು ದಾರುಣ ಸಾವು

- Advertisement -
- Advertisement -

ಬೆಳ್ತಂಗಡಿ: ವಿಧ್ಯುತ್ ತಗುಲಿ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ನಡೆದಿದೆ.

ಕೊಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ ಗೀತಾ ತನ್ನ ಮಗು ಭವಿಷ್ (3) ನನ್ನು ಹಿಡಿದುಕೊಂಡು ಪಂಪು ಸ್ವಿಚ್ ಹಾಕಲು ಹೋಗಿದ್ದ ಸಂದರ್ಭದಲ್ಲಿ ವಿಧ್ಯುತ್ ತಗುಲಿ, ಈ ದುರ್ಘಟನೆ ಸಂಭವಿಸಿದೆ.

ದನಗಳಿಗೆ ನೀರು ಕೊಡುವ ಉದ್ದೇಶದಿಂದ ಪಂಪ್ ಸ್ವಿಚ್ ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!