Wednesday, June 24, 2026
Homeಕರಾವಳಿಮಂಗಳೂರುಪುತ್ತೂರು; ನ್ಯಾಯಕ್ಕಾಗಿ ಧರಣಿ ಮುಂದುವರೆಸಿದ ಕೌಕ್ರಾಡಿಯ ಮನೆ ಕಳೆದುಕೊಂಡ ವೃದ್ಧ ದಂಪತಿ

ಪುತ್ತೂರು; ನ್ಯಾಯಕ್ಕಾಗಿ ಧರಣಿ ಮುಂದುವರೆಸಿದ ಕೌಕ್ರಾಡಿಯ ಮನೆ ಕಳೆದುಕೊಂಡ ವೃದ್ಧ ದಂಪತಿ

- Advertisement -
- Advertisement -

ಪುತ್ತೂರು; ಮನೆ ಕಳೆದುಕೊಂಡ ಕೌಕ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿ ರಾಧಾಮ್ಮ, ಮುತ್ತು ಸ್ವಾಮಿ ದಂಪತಿ ತಮಗೆ ನ್ಯಾಯ ಕೊಡಿಸುವಂತೆ ನೀತಿ ತಂಡದ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಆವರಣದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂದುವರೆಸಿದ್ದು, ಆರನೇ ದಿನಕ್ಕೆ ವೃದ್ಧ ದಂಪತಿಗಳ ಆಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.


ಮನೆ ಕೆಡವಿದ ಕಡಬ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ‌ ಧರಣಿ ನಡೆಸಲಾಗುತ್ತಿದ್ದು, ಅಕ್ರಮವಾಗಿ‌ ತಮ್ಮ ಮನೆ ಕೆಡವಿ ಹಾಕಿದ್ದಾರೆ ಎಂದು ಆರೋಪಿಸಿ‌ ದಂಪತಿಗಳು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಪುತ್ತೂರು ಸಹಾಯಕ ಆಯುಕ್ತೆ ಸ್ಟೇಲ್ಲಾ ವರ್ಗಿಸ್ ಅವರು ಧರಣಿ ನಿರತರನ್ನು ಭೇಟಿ ಮಾಡಿ ಹದಿನೈದು ದಿನಗಳ ಸಮಯಾವಕಾಶ ಕೇಳಿದ್ದರು. ಸದ್ಯ ಧರಣಿ ಮುಂದುವರೆಸಿರುವ ದಂಪತಿ  ತನಿಖೆಯಲ್ಲೂ ನ್ಯಾಯ‌ ದೊರಕದಿದ್ದಲ್ಲಿ ಅನ್ನ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!