Monday, June 8, 2026
Homeತಾಜಾ ಸುದ್ದಿಗುಜರಾತ್ ನಲ್ಲಿ 5.5ರಷ್ಟು ಪ್ರಬಲ ಭೂಕಂಪನ

ಗುಜರಾತ್ ನಲ್ಲಿ 5.5ರಷ್ಟು ಪ್ರಬಲ ಭೂಕಂಪನ

- Advertisement -
- Advertisement -

ರಾಜಧಾನಿ ಅಹಮದಾಬಾದ್ ಸೇರಿದಂತೆ ಗುಜರಾತ್ ರಾಜ್ಯದ ಹಲವೆಡೆ ಭಾನುವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 5.5ರಷ್ಟು ಪ್ರಬಲ ಭೂಕಂಪನ ಸಂಭವಿಸಿದೆ.

ರಾಜ್ ಕೋಟ್ ನಲ್ಲಿ ಭೂಕಂಪನ ಕೇಂದ್ರ ದಾಖಲಾಗಿದ್ದು, ಸುಮಾರು 118 ಕಿ.ಮೀ. ದೂರದವರೆಗೆ ವ್ಯಾಪಿಸಿತ್ತು. ಭಾನುವಾರ ರಾತ್ರಿ 8.13ಕ್ಕೆ ಭೂಕಂಪನ ಸಂಭವಿಸಿದ್ದು, ಸಾವು ನೋವಿನ ವರದಿಯಾಗಿಲ್ಲ.

ಕಛ್, ರಾಜ್ ಕೋಟ್, ಅಹಮದಾಬಾದ್ ಗಳಲ್ಲಿ ಭೂಕಂಪನ ಸಂಭವಿಸಿದ್ದು, ಜನರು ಭಯ ಭೀತಿಯಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ರಾಜಕೋಟ್‌, ಕಚ್‌ ಹಾಗೂ ಪಠಾಣ್‌ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿಯ ವರದಿ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಗುಜರಾತ್‌ ಸಿಎಂ ಕಚೇರಿ, ಮುಖ್ಯಮಂತ್ರಿ ವಿಜಯ್‌ ರೂಪಾನಿ, ತಕ್ಷಣವೇ ರಾಜಕೋಟ್‌, ಕಚ್‌ ಮತ್ತು ಪಠಾಣ್‌ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆದಿದ್ದು, ಪರಿಸ್ಥಿತಿಯ ವರದಿ ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ಇದುವರೆಗೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

- Advertisement -

Latest News

error: Content is protected !!