Friday, May 3, 2024
Homeತಾಜಾ ಸುದ್ದಿಭಾರತ ಸೇರಿ‌ 5 ದೇಶಗಳಲ್ಲಿ ಭೂ ಕಂಪನದ ಅನುಭವ

ಭಾರತ ಸೇರಿ‌ 5 ದೇಶಗಳಲ್ಲಿ ಭೂ ಕಂಪನದ ಅನುಭವ

spot_img
- Advertisement -
- Advertisement -

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂ ಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.6 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ.ಅಲ್ಲದೇ ಪಾಕಿಸ್ತಾನದ, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್, ಚೀನಾ ಸೇರಿದಂತೆ ಐದಕ್ಕೂ ಹೆಚ್ಚು ದೇಶಗಳಲ್ಲಿ ಭೂಮಿ ನಡುಗಿದೆ.

ಅಫ್ಘಾನಿಸ್ತಾನ ಭೂ ಕಂಪನದ ಕೇಂದ್ರ ಬಿಂದು ಆಗಿದ್ದು ಫೈಜಾಬಾದ್ ನಿಂದ 133 ಕಿಲೋಮೀಟರ್ ದೂರದಲ್ಲಿರುವ ಕಲಾಫ್ಘಾನ್ ಕಂಪನದ ಕೇಂದ್ರ ಬಿಂದು ಆಗಿತ್ತು ಎಂದು ಹೇಳಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುಮಾರು 3 ಸೆಕೆಂಡ್ ನಷ್ಟು ಭೂಮಿ‌ ಕಂಪಿಸಿದ್ದು, ಆತಂಕದಿಂದ ಜನ ಮನೆಯೊಳಗಿನಿಂದ ಓಡಿ ಹೊರಗೆ ಬಂದಿದ್ದಾರೆ.

- Advertisement -
spot_img

Latest News

error: Content is protected !!