ಮಾಣಿ: ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ ಸಾರ್ವಜನಿಕ ಕಬ್ಬಡಿ ಪದ್ಯಾಂಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯನ್ನು 2024 ಸೆ.29 ಭಾನುವಾರದಂದು ಮಾಣಿಯ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 9 ಗಂಟೆಗೆ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಅವರು ಉದ್ಘಾಟಿಸಲಿದ್ದಾರೆ.
ಕಬ್ಬಡಿ ಪಂದ್ಯಾಟವು ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದ್ದು, ತಂಡವನ್ನು ಸ್ಥಳದಲ್ಲೇ ರಚನೆಮಾಡಲಾಗುತ್ತದೆ. ಕ್ರೀಡಾಕೂಟದಲ್ಲಿ ಅಂಪೈರ್ ಮತ್ತು ಸಂಘಟಕರ ತೀರ್ಮಾನವೇ ಅಂತಿ. ಪುರುಷರ ಹಗ್ಗ ಜಗ್ಗಾಟಜ್ಜೆ 7 ಜನರ ತಂಡವನ್ನು ತಾವೇ ರಚಿಸಿ ತರತಕ್ಕದು. ಹಗ್ಗಜಗ್ಗಾಟ ಸ್ಪರ್ಧೆಯು 4 ಗಂಟೆಗೆ ಆರಂಭವಾಗುತ್ತದೆ. ಮಹಿಳೆಯರ ಆಟೋಟ ಸ್ಪರ್ಧೆಯು ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಲಿದೆ.
ಹಿರಿಯರ ಕಬ್ಬಡಿ ಪಂದ್ಯಾಟದ ಬಹುಮಾನಗಳು: ಪ್ರಥಮ 4,000 ರೂ ನಗದು, ದ್ವಿತೀಯ 3,001 ರೂ ನಗದನ್ನು ಒಳಗೊಂಡಿದೆ.
ಹಗ್ಗಜಗ್ಗಾಟದ ಬಹುಮಾನಗಳು; ಪ್ರಥಮ 2,501 ರೂ ನಗದು, ದ್ವಿತೀಯ 2,001 ರೂ ನಗದನ್ನು ಒಳಗೊಂಡಿರುತ್ತದೆ.
9ನೇ ತರಗತಿಯಿಂದ ಪದವಿಯವರೆಗೆ ಕಬ್ಬಡಿ ಪಂದ್ಯಾಟದ ಬಹುಮಾನಗಳು: ಪ್ರಥಮ 1,501 ರೂ ನಗದು, ದ್ವಿತೀಯ 1,001 ರೂ ನಗದನ್ನು ಒಳಗೊಂಡಿದೆ.
1ನೇ ತರಗತಿಯಿಂದ 8ನೇ ತರಗತಿಯವರೆಗೆ ಕಬ್ಬಡಿ ಪಂದ್ಯಾಟದ ಬಹುಮಾನಗಳು: ಪ್ರಥಮ 701 ರೂ ನಗದು,ದ್ವಿತೀಯ 301 ರೂ ನಗದನ್ನು ಒಳಗೊಂಡಿದೆ ಎಂದು ಶಾರದಾ ಯುವ ವೇದಿಕೆಯ ಸೇವಾ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮುಖಂಡರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ರಾಜಾರಾಮ್, ಕಾಡೂರು-ಪೆರಾಜೆ, ಯಶವಂತ ಪೂಜಾರಿ ಅವರು ಉಪಸ್ಥಿತರಿರುವರು.ಹೆಚ್ಚಿನ ಮಾಹಿತಿಗಾಗಿ 9632060672 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.