Saturday, June 28, 2025
Homeತಾಜಾ ಸುದ್ದಿಭೀಮಾ ಸಿನಿಮಾ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್‌

ಭೀಮಾ ಸಿನಿಮಾ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್‌

spot_img
- Advertisement -
- Advertisement -

ಬೆಂಗಳೂರು: ಬಾಕ್ಸ್‌ಆಫೀಸ್‌ನಲ್ಲಿ ‘ಭೀಮ’ ಸಿನಿಮಾ ಸದ್ದು ಮಾಡುತ್ತಿರುವಾಗಲೇ ನಟ, ನಿರ್ದೇಶಕ ದುನಿಯಾ ವಿಜಯ್‌ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ‘ಸಲಗ’ ಹಾಗೂ ‘ಭೀಮ’ ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್‌ ಹೇಳಿದ್ದಾರೆ. 

‘VK 30’ ಎಂದರೆ ವಿಜಯ್‌ ಅವರ 30ನೇ ಸಿನಿಮಾ ಎಂಬ ಶೀರ್ಷಿಕೆಯನ್ನು ಸದ್ಯಕ್ಕೆ ಈ ಸಿನಿಮಾಗೆ ಇಡಲಾಗಿದೆ. ಸಿನಿಮಾಗೆ ಆರ್‌ಆರ್‌ ವೆಟ್ರಿ ವೇಲ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದು, ಚಿತ್ರದ ಕಥೆಯೂ ಅವರದ್ದೇ ಆಗಿದೆ ಎನ್ನಲಾಗಿದೆ.

`VK 30′ ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್‌ ಕಾಡಿನಲ್ಲಿ ನಡೆಯುವ ಕಥೆಯಂತಿದ್ದು, ಪೋಸ್ಟರ್ ಚಿತ್ರದ ಕಥೆಯ ಬಗ್ಗೆ ಕುತೂಹಲ ಹುಟ್ಟಿಸುವಂತಿದೆ. ಪ್ರಸ್ತುತ ‘ಕಾಟೇರ’ ಕಥೆಗಾರ ಜಡೇಶ್‌ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!