Monday, June 29, 2026
Homeಕರಾವಳಿಬಂಟ್ವಾಳ: ಗಾಯಗೊಂಡು ಬಿದ್ದಿದ್ದ ಕುಡುಕನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು; ಗುಣಮುಖನಾಗಿ ಬಂದು ಪೊಲೀಸರಿಗೆ ಧನ್ಯವಾದ ಸಲ್ಲಿಸಿದ...

ಬಂಟ್ವಾಳ: ಗಾಯಗೊಂಡು ಬಿದ್ದಿದ್ದ ಕುಡುಕನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು; ಗುಣಮುಖನಾಗಿ ಬಂದು ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ವ್ಯಕ್ತಿ

- Advertisement -
- Advertisement -

ಬಂಟ್ವಾಳ: ಗಾಯಗೊಂಡು ಬಿದ್ದಿದ್ದ ಕುಡುಕನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರಿಗೆ ಗುಣಮುಖನಾಗಿ ಬಂದು ವ್ಯಕ್ತಿ ಧನ್ಯವಾದ ಸಲ್ಲಿಸಿದ ಅಪರೂಪದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಜೂನ್.13ರಂದು ನರಿಕೊಂಬು ಗ್ರಾ.ಪಂಚಾಯತ್ ಕಚೇರಿಯ ಜಗಲಿಯಲ್ಲಿ ವ್ಯಕ್ತಿಯೋರ್ವ ಬಿದ್ದುಕೊಂಡಿದ್ದ.  ಜೂ.12ರಂದು ರಾತ್ರಿ ಈತ ಪಂಚಾಯತ್ ನ ಜಗುಲಿಯಲ್ಲಿ ಬಂದು ಮಲಗಿದ್ದ.ಈ ವೇಳೆ ಈತನ‌ ಕೈಗೆ ಗಾಯವಾಗಿ ರಕ್ತಸ್ರಾವವಾಗಿತ್ತು.

ಕುಡಿದ‌ ಮತ್ತಿನಲ್ಲಿ ಕಚೇರಿ ಬಳಿಯೇ ಮಲಗಿದ್ದ.ಶಿವಶಂಕರ ರಕ್ತದ ನಡುವೆ ಬಿದ್ದುಕೊಂಡಿದ್ದರಿಂದ ಜನರು ಹತ್ತಿರ ಹೋಗಲು ಹೆದರುತ್ತಿದ್ದರು.

ಘಟನೆ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಕ್ ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು.

ಆತ ನಿನ್ನೆ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೂಡಲೇ ಮೊದಲು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಬಂದು ಧನ್ಯವಾದ ಹೇಳಿದ್ದಾನೆ.ಆ ಮೂಲಕ ತನಗೆ ಸಹಾಯ ಮಾಡಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಿ ಮಾದರಿಯಾಗಿದ್ದಾನೆ.

- Advertisement -

Latest News

error: Content is protected !!