Sunday, June 7, 2026
Homeಅಪರಾಧಮಂಗಳೂರು : ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ!

ಮಂಗಳೂರು : ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ!

- Advertisement -
- Advertisement -

ಮಂಗಳೂರು: ವಿಹಾರಕ್ಕೆಂದು ಗೆಳೆಯರ ಜೊತೆ ಬಂದು ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ಸಂದರ್ಭ ಸಮುದ್ರಪಾಲಾದ ಯುವಕನ ಮೃತದೇಹವು ಸುರತ್ಕಲ್ ಠಾಣೆಯ ಚಿತ್ರಾಪುರ ಕಡಲ ತೀರದಲ್ಲಿ ಪತ್ತೆಯಾಗಿದೆ.

ಸರಿಪಳ್ಳ ನಿವಾಸಿ ತಿಲಕ್ ರಾಜ್ (20) ಮೃತ ಯುವಕ ಎಂದು ಗುರುತಿಸಲಾಗಿದೆ. ಗೆಳೆಯರ ಜೊತೆ ವಿಹಾರಕ್ಕೆಂದು ಬಂದಿದ್ದ ಈತ, ಮಂಗಳೂರು ಹೊರವಲಯದ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದು, ಇದೀಗ ಆತನ ಮೃತದೇಹವು ಪತ್ತೆಯಾಗಿದೆ. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!