Wednesday, July 15, 2026
Homeಕರಾವಳಿಬಂಟ್ವಾಳದಲ್ಲಿ ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ; ವಿದ್ಯುತ್ ಕಂಬಕ್ಕೆ ಡಿಕ್ಕಿ

ಬಂಟ್ವಾಳದಲ್ಲಿ ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ; ವಿದ್ಯುತ್ ಕಂಬಕ್ಕೆ ಡಿಕ್ಕಿ

- Advertisement -
- Advertisement -

ಬಂಟ್ವಾಳ: ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ(ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ‌ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಅ.14 ಸೋಮವಾರದಂದು ಬೆಳಿಗ್ಗೆ ನಡೆದಿದೆ.

ಘಟನೆಯ ವಿವರ: ಬಡಕಬೈಲು ಸೈಂಟ್ ಡೊಮಿನಿಕ್‌ ಆಂಗ್ಲ ‌ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ‌ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್ ಕಂಬಕ್ಕೆ ‌ಡಿಕ್ಕಿ‌ಹೊಡೆದಿದೆ. ಘಟನೆಯಲ್ಲಿ ಚಾಲಕ ಸಹಿತ ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!