Sunday, May 19, 2024
Homeಕರಾವಳಿಮಂಗಳೂರು : ಡಾ| ಸಂಧ್ಯಾ ಎಸ್‌. ಪೈ ಅವರಿಗೆ "ಕಾರಂತ ಪ್ರಶಸ್ತಿ" ಪ್ರದಾನ !

ಮಂಗಳೂರು : ಡಾ| ಸಂಧ್ಯಾ ಎಸ್‌. ಪೈ ಅವರಿಗೆ “ಕಾರಂತ ಪ್ರಶಸ್ತಿ” ಪ್ರದಾನ !

spot_img
- Advertisement -
- Advertisement -

ಮಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟಹಬ್ಬದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿಯಂತೆ ಅ.10ರಂದು ‘ಕಾರಂತ ಪ್ರಶಸ್ತಿ’ ಪ್ರದಾನ ಸಮಾರಂಭ ಮಂಗಳೂರು ಕೊಡಿಯಾಲ್‌ಗುತ್ತು ಜನತಾ ಡಿಲಕ್ಸ್‌ನ ಪತ್ತುಮುಡಿ ಸೌಧ ಸಭಾಂಗಣದಲ್ಲಿ ನಡೆಯಿತು. ಈ ವರ್ಷದ “ಕಾರಂತ ಪ್ರಶಸ್ತಿ’ಯನ್ನು ಲೇಖಕರು, “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಅವರಿಗೆ ನೀಡಿ ಗೌರವಿಸಲಾಗಿದೆ.

ಡಾ| ಸಂಧ್ಯಾ ಎಸ್‌. ಪೈ ಅವರು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಹಾಗೂ
ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಓರ್ವ ಮಹಿಳಾ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.ಇವರಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ 2013ರಲ್ಲಿ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸಿದೆ. ಪತ್ರಿಕೋದ್ಯಮದಲ್ಲಿ ಉನ್ನತ ಸಾಧನೆಗಾಗಿ “ಅತ್ತಿಮಬ್ಬೆ ಪ್ರಶಸ್ತಿ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ,ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ , ವಿದ್ವಾಂಸ ಡಾ| ಪ್ರಭಾಕರ ಜೋಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!