- Advertisement -
- Advertisement -
ಉಡುಪಿ: ಪತಿ ಹಾಗೂ ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಶಾಹಿದಾ ದೂರು ನೀಡಿದ ಯುವತಿ.
ಬ್ರಹ್ಮಾವರದ ಹಾರಾಡಿ ಕುಕ್ಕುಡೆಯ ನಿವಾಸಿ ಮೊಹಮ್ಮದ್ ಶಾರೀಕ್ ಜತೆಗೆ ಶಾಹಿದಾಗೆ 2020ರಲ್ಲಿ ವಿವಾಹವಾಗಿದ್ದು,ಮದುವೆಯ ಸಮಯದಲ್ಲಿ 10 ಪವನ್ ಚಿನ್ನಾಭರಣ, 3 ಲಕ್ಷ ರೂ. ನಗದು ನೀಡಿದ್ದರು.
ಶಾರಿಕ್ – ಶಾಹಿದಾ ದಂಪತಿಗೆ 10 ತಿಂಗಳ ಹೆಣ್ಣು ಮಗುವಿದೆ. ಈ ಮಧ್ಯೆ ವರದಕ್ಷಿಣೆ ಹಣ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಚಿನ್ನಾಭರಣಕ್ಕಾಗಿ ಬೇಡಿಕೆ ಇಟ್ಟು ಪತಿ ಶಾರೀಕ್ ಮತ್ತು ಪತಿ ಮನೆಯವರು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.
- Advertisement -