Wednesday, July 15, 2026
Homeತಾಜಾ ಸುದ್ದಿಹೋಳಿ ಆಡುವಾಗ ಮುಸ್ಲಿಮರ ಮೇಲೆ ಬಣ್ಣ ಎರಚಬೇಡಿ: ಎಸ್ ಪಿ ನಾಯಕ ಅಬು ಅಜ್ಮಿ

ಹೋಳಿ ಆಡುವಾಗ ಮುಸ್ಲಿಮರ ಮೇಲೆ ಬಣ್ಣ ಎರಚಬೇಡಿ: ಎಸ್ ಪಿ ನಾಯಕ ಅಬು ಅಜ್ಮಿ

- Advertisement -
- Advertisement -

ಮುಂಬೈ: ನಾಳೆ ಹೋಳಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಹಬ್ಬ ಆಚರಣೆ ಸಂದರ್ಭದಲ್ಲಿ ಒಪ್ಪಿಗೆಯಿಲ್ಲದೆ ಯಾವುದೇ ಮುಸ್ಲಿಮರ ಮೇಲೆ ಬಣ್ಣ ಎರಚಬೇಡಿ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಹೇಳಿಕೆ ನೀಡಿದ್ದಾರೆ.

ನಾಳೆ ಹೋಳಿ ಆಚರಿಸುವ ಯಾರಾದರೂ ಅದನ್ನು ಉತ್ಸಾಹದಿಂದ ಆಚರಿಸಬೇಕೆಂದು ನಾನು ವಿನಂತಿಸುತ್ತೇನೆ. ಆದರೆ ಹಬ್ಬಗಳನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಯಿಸಿದರು. 

ಇನ್ನು ಮುಸ್ಲಿಂ ಬಂಧುಗಳ ಮೇಲೆ ಯಾರಾದರೂ ಬಣ್ಣ ಎರಚಿದರೆ ಜಗಳಕ್ಕೆ ಇಳಿಯಬೇಡಿ. ಇದು ನನ್ನ ವಿನಂತಿಯಾಗಿದೆ. ಏಕೆಂದರೆ ಇದು ಕ್ಷಮೆಯ, ಸಹೋದರತ್ವದ ತಿಂಗಳು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!