Thursday, May 2, 2024
Homeಕರಾವಳಿಪುತ್ತೂರಿನಲ್ಲಿ ಮಾಸ್ಕ್ ಧರಿಸಿ ಮನುಷ್ಯರಿಗೆ ಮಾದರಿಯಾದ ನಾಯಿ:ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಪುತ್ತೂರಿನಲ್ಲಿ ಮಾಸ್ಕ್ ಧರಿಸಿ ಮನುಷ್ಯರಿಗೆ ಮಾದರಿಯಾದ ನಾಯಿ:ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

spot_img
- Advertisement -
- Advertisement -

ಪುತ್ತೂರು: ಕೊರೊನಾ  ಅಂದ್ರೆ ಸಾಕು ಎದೆ ನಡುಗೋಕೆ ಶುರುವಾಗುತ್ತಿದೆ. ರಾಜ್ಯದಲ್ಲಿ ಅಷ್ಟರ ಮಟ್ಟಿಗೆ ಕೊರೊನಾ ಸಾವು ನೋವಾಗುತ್ತಿದೆ. ಇಷ್ಟ ಆದ್ರೂ ಕೆಲವರು ಕೊರೊನಾ ಇಜ್ಜಿ ಮರ್ರೆ. ಪೊಕ್ಕಡೆ ಆಸ್ಪತ್ರೆದಕುಲು, ಸರ್ಕಾರದಕುಲು ದುಡ್ಡು ಮಾಲ್ಪರೆ ಪನ್ಪುನಿ ಅಂತಾ ಮಾಸ್ಕ್ ಹಾಕ್ದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಆದ್ರೆ ಅಂತಹವರಿಗೆ ಕೊರೊನಾದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಡುತ್ತಿದೆ ಪುತ್ತೂರಿನಲ್ಲೊಂದು ನಾಯಿ.

ಹೌದು.. ಪುತ್ತೂರಿನ ದರ್ಬೆಯಲ್ಲಿ ನಿನ್ನೆ ಮಾಸ್ಕ್ ಧರಿಸಿದ ನಾಯಿ ಕಂಡು ಬಂತು.ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಂದಿ ನಾಯಿ ಮಾಸ್ಕ್ ಹಾಕು ಅಂತೆ ಕರೆದು ಹೇಳುವಂತಿತ್ತು ಆ ದೃಶ್ಯ.ಅಂದ್ಹಾಗೆ ಇದು   ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾದ ಪ್ರವೀಣ್ ಡಿ’ಸೋಜ ಅವರ ನಾಯಿ.  ತಮ್ಮ ಪ್ರೀತಿಯ ಎರಡೂವರೆ ವರ್ಷದ ಪ್ರೀತಿಯ ನಾಯಿಗೆ ಅವರು `ಹಗ್’ ಎಂದು ನಾಮಕರಣ ಮಾಡಿದ್ದಾರೆ. ನಾಯಿಯನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವ ಪ್ರವೀಣ್ ಅವರು ಅದರ ಆರೋಗ್ಯದ ಬಗ್ಗೆಯೂ ಅಷ್ಟೇ ಮುತುವರ್ಜಿ ವಹಿಸುತ್ತಾರೆ ಅನ್ನೋದು ಅವರು ನಾಯಿಗೆ ಹಾಕಿದ ಮಾಸ್ಕ್ ನೋಡಿದ್ರೇನೆ ಗೊತ್ತಾಗುತ್ತೆ.

ಒಟ್ಟಿನಲ್ಲಿ ಮಾಸ್ಕ್ ಹಾಕಿಲ್ಲ ಅಂದ್ರೆ ಕೊರೊನಾ ಬರುತ್ತೆ ಅನ್ನೋದು ಸುಳ್ಳು ಎಂಬಂತೆ ಓಡಾಡುತ್ತಿರುವ ಮಂದಿಗೆ ಈ ಶ್ವಾನ ಜಾಗೃತಿಯ ಪಾಠ ಹೇಳುವಂತಿದೆ.

- Advertisement -
spot_img

Latest News

error: Content is protected !!