Thursday, June 4, 2026
Homeಕರಾವಳಿಕಡಬ: ಬಾಲಕನಿಗೆ ಹುಚ್ಚು ನಾಯಿ ಕಡಿತ !

ಕಡಬ: ಬಾಲಕನಿಗೆ ಹುಚ್ಚು ನಾಯಿ ಕಡಿತ !

- Advertisement -
- Advertisement -

ಕಡಬ: ಹುಚ್ಚುನಾಯಿ ಒಂದು ವಿದ್ಯಾರ್ಥಿಯೋರ್ವನಿಗೆ ಕಡಿದಿದೆ. ಇದರ ಪರಿಣಾಮ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಕಡಬ ಪೇಟೆಯಲ್ಲಿ ಇಂದು ಈ ಘಟನೆ ಸಂಭವಿಸಿದೆ. ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ.

ಎಂದಿನಂತೆ ಶಾಲೆ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ‌. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದೀಗ ಹುಚ್ಚುನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ. ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿಯೂ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು.

- Advertisement -

Latest News

error: Content is protected !!