Monday, May 20, 2024
Homeಪ್ರಮುಖ-ಸುದ್ದಿಡಿಜೆ ಹಳ್ಳಿ ಗಲಭೆಯಿಂದಾಗಿ ಅಖಂಡ ಶ್ರೀನಿವಾಸ್ ಅವರಿಗೆ ಆದ ನಷ್ಟವೆಷ್ಟು ಗೊತ್ತಾ?

ಡಿಜೆ ಹಳ್ಳಿ ಗಲಭೆಯಿಂದಾಗಿ ಅಖಂಡ ಶ್ರೀನಿವಾಸ್ ಅವರಿಗೆ ಆದ ನಷ್ಟವೆಷ್ಟು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಕೋರರು ಹಾಕಿದ ಬೆಂಕಿಗೆ ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿಯವರ ಮನೆ ಮಾತ್ರ ಸುಟ್ಟು ಕರಕಲಾಗದೇ ಸಾಕಷ್ಟು ಆಸ್ತಿ ನಷ್ಟವಾಗಿದೆ. ವಾಹನಗಳು ಸಹ ಭಸ್ಮವಾಗಿದ್ದು, ಅವರಿಗಾದ ಅಂದಾಜು ನಷ್ಟ ಹೀಗಿದೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಅಳೆದು ತೂಗಿ ಸದ್ಯ ದೂರು ನೀಡಿದ್ದಾರೆ. ಅಲ್ಲದೆ, ದೂರು ನೀಡಲು ತಡವಾಗಿದ್ದಕ್ಕೆ ಕಾರಣವನ್ನು ನೀಡಿದ್ದಾರೆ. ಮನೆಯ ವಿಚಾರಕ್ಕೆ ಬಂದರೆ ಶಾಸಕರು ಒಂದೇ ಮನೆಯಲ್ಲಿ ಇಬ್ಬರು ಸಹೋದರರ ಕುಟುಂಬದ ಜತೆ ವಾಸವಿದ್ದರು.

ಮೂರು ಅಂತಸ್ತಿನ ಮನೆಯಲ್ಲಿ ಶಾಸಕರು ಸೇರಿ ಮೂವರು ಸಹೋದರರ ವಾಸವಿದ್ದರು. ಬೆಂಕಿ ಹಚ್ಚಿದ್ದರಿಂದ ಶಾಸಕರ ಆಸ್ತಿ‌ ಅಷ್ಟೇ ಅಲ್ಲ ಇಬ್ಬರು ಸಹೋದರರ ಆಸ್ತಿ ಕೂಡ ಭಸ್ಮವಾಗಿದೆ. ಮೂವರು ಸಹೋದರರ ಬರೋಬ್ಬರಿ 3 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.
ಶಾಸಕರ ಮನೆಯಲ್ಲಿ 20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣವಿತ್ತು. ಮನೆಯ ಕಟ್ಟಡ ಸಂಪೂರ್ಣ ನಾಶವಾಗಿದ್ದು 50 ಲಕ್ಷ ರೂ.ನಷ್ಟವಾಗಿದೆ. ಕಾರು ಹಾಗೂ ಬೈಕ್ ಗಳು ಸೇರಿ 20 ಲಕ್ಷ‌ಮೌಲ್ಯದ ವಾಹನಗಳು ಭಸ್ಮವಾಗಿದೆ. ಶಾಸಕರ ಅಪಾರ ಪ್ರಮಾಣ ಆಸ್ತಿಯ ಮೂಲ‌ ದಾಖಲೆಗಳು ಸುಟ್ಟು ಬೂದಿಯಾಗಿದೆ.

ಇನ್ನು ಶಾಸಕರ ಸಹೋದರ ಮಹೇಶ್ ಕುಮಾರ್​ಗೆ ಸೇರಿದ 10 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ. ಇದರ ಜತೆಗೆ ಅವರ ಮನೆಯಲ್ಲಿದ್ದ 8.5 ಲಕ್ಷ ರೂಪಾಯಿ ನಗದನ್ನು ಪುಂಡರು ದೋಚಿದ್ದಾರೆ. ಮತ್ತೊಬ್ಬ ಸಹೋದರ ಚಂದ್ರಶೇಖರ್ ‌ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ. ಅಲ್ಲದೆ, ಮನೆಯಲ್ಲಿದ್ದ 3 ಲಕ್ಷ‌ ನಗದು ಕೂಡ ಕಳ್ಳತನವಾಗಿದೆ. ಮೂವರು ಸಹೋದರರಿಗೆ ಒಟ್ಟು 3 ಕೋಟಿ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ನೀಡಲು ತಡವಾಗಿದ್ದಕ್ಕೆ‌ ಮಾನಸಿಕ‌ ಸ್ಥಿಮಿತತೆ ಕಳೆದುಕೊಂಡಿದ್ದೆ ಕಾರಣವೆಂದು ಶಾಸಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಭದ್ರತೆಯ ದೃಷ್ಟಿಯಿಂದ‌ ಮನೆಗೆ ಭೇಟಿ‌ ನೀಡಲಾಗಿರಲಿಲ್ಲ. ಇದೊಂದು ಪೂರ್ವ ನಿಯೋಜಿತ ಘಟನೆ ಎಂದಿದ್ದಾರೆ. ತಮ್ಮ‌ ಕುಟುಂಬವನ್ನು ಸಜೀವದಹನ ದಹನಕ್ಕೆ‌ ಸಂಚು ಮಾಡಲಾಗಿದೆ. ಸಾವಿರಾರು ಕಿಡಿಗೇಡಿಗಳನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಕಿಡಿಗೇಡಿಗಳನ್ನು ಅಕ್ಕಪಕ್ಕದ ‌ಮನೆಯವರು ಹಾಗೂ ಸ್ನೇಹಿತರು ನೋಡದ್ದಾರೆ. ದುಷ್ಕರ್ಮಿಗಳ‌ ವಿರುದ್ದ ಕ್ರಮಗೈಗೊಳ್ಳುವಂತೆ ದೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!