Thursday, June 4, 2026
Homeಕರಾವಳಿಸುಳ್ಯ: ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕ ದಿವಾಕರ ಮುಂಡಾಜೆ ನಿಧನ

ಸುಳ್ಯ: ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕ ದಿವಾಕರ ಮುಂಡಾಜೆ ನಿಧನ

- Advertisement -
- Advertisement -

ಸುಳ್ಯ: ಹರಿಹರ ಪಲ್ಲತಡ್ಕದ  ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕ ದಿವಾಕರ ಮುಂಡಾಜೆ(55) ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿವಾಕರ ಮುಂಡಾಜೆಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.  


ದಿವಾಕರ ಮುಂಡಾಜೆ  ಅವರು ಬೆಳಿಗ್ಗೆ ತನ್ನ ಅಂಗಡಿ ತೆರೆಯಲೆಂದು ಮನೆಯಿಂದ ಕಾರಲ್ಲಿ ಬರುತ್ತಿದ್ದ ದಿವಾಕರ ಮುಂಡಾಜೆಯವರಿಗೆ ಹರಿಹರ ಪಲ್ಲತಡ್ಕ ಪೇಟೆಯ ಬಳಿ ಹೃದಯಘಾತವಾಗಿದೆ. ಕೂಡಲೇ ಕಾರು ನಿಲ್ಲಿಸಿದ್ದರು. ತೀವ್ರ ಹೃದಯಾಘಾತದಿಂದಾಗಿ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಕೂಡಲೇ ಸ್ಥಳೀಯರು ವೈದ್ಯರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಯುವಕರು ಸೇರಿದಂತೆ ಮಧ್ಯ ವಯಸ್ಸಿನವರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಹೃದಯಘಾತದ ತೀವ್ರತೆಗೆ ಎಷ್ಟು ಅಂದರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಅವಕಾಶವೇ ಇಲ್ಲದಂತಾಗಿದ್ದು ಸದ್ಯ ಭಾರೀ ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!