Monday, June 8, 2026
Homeಕರಾವಳಿಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಗಾಯಾಳು ಆಟೋ ಚಾಲಕನ ಚಿಕಿತ್ಸಾ ವೆಚ್ಚ ಭರಿಸೋದಾಗಿ ಜಿಲ್ಲಾಡಳಿತ...

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಗಾಯಾಳು ಆಟೋ ಚಾಲಕನ ಚಿಕಿತ್ಸಾ ವೆಚ್ಚ ಭರಿಸೋದಾಗಿ ಜಿಲ್ಲಾಡಳಿತ ಪತ್ರ

- Advertisement -
- Advertisement -

ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ‌ವೆಚ್ಚ ಭರಿಸುವುದಾಗಿ ದಕ್ಷಿಣಕನ್ನಡ ‌ ಜಿಲ್ಲಾಡಳಿತ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ‌ಮುಖ್ಯಸ್ಥರಿಗೆ  ಪತ್ರ ಬರೆದಿದೆ.

ಪತ್ರದಲ್ಲಿ ಸಂತ್ರಸ್ತರ ಕುಟುಂಬದಿಂದ ಯಾವುದೇ ವೆಚ್ಚವನ್ನು ಭರಿಸಲು ಒತ್ತಡ ಹಾಕದೇ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ಮುಂದುವರಿಸುವಂತೆ ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಜಿಲ್ಲಾಡಳಿತ ಪತ್ರದ ಮೂಲಕ ತಿಳಿಸಿದೆ.

ಈ ಹಿಂದೆ ಚಾಲಕ ಪುರುಷೋತ್ತಮ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದಾಗ ಧನ ಸಹಾಯ ನೀಡಿದ್ದರು. ಇನ್ನು ಅವರ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಗುರುಬೆಳದಿಂಗಳು ಫೌಂಡೇಶನ್ ಅವರ ಮನೆಯ ನವೀಕರಣ ಕಾರ್ಯಕ್ಕೆ ಕೂಡಾ ನೆರವು ನೀಡಿದೆ.

- Advertisement -

Latest News

error: Content is protected !!