Monday, June 29, 2026
Homeತಾಜಾ ಸುದ್ದಿಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ಅರೆಸ್ಟ್

ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ಅರೆಸ್ಟ್

- Advertisement -
- Advertisement -

ಮುಂಬೈ: ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದ ಬೆಡಗಿ ಮೊನಾಲಿಸಾಗೆ ಸಿನಿಮಾದಲ್ಲಿ ನಟಿಸುವ ಆಫರ್ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ.

ಘಟನೆಯ ವಿವರ: ಝಾನ್ಸಿ ಎಂಬ ಪುಟ್ಟ ಊರಿನ ಯುವತಿಯು ಸಿನಿಮಾದಲ್ಲಿ ನಟಿಯಾಗಬೇಕೆಂಬ ಆಸೆ ಹೊಂದಿದ್ದು, ಈ ಹುಡುಗಿಗೆ ನಿರ್ದೇಶಕ ಸನೋಜ್ ಮಿಶ್ರಾ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ 2020 ರಲ್ಲಿ ಪರಿಚಯವಾಗಿದ್ದರು. ಇನ್ನು ಆಕೆಗೆ 2021 ರಲ್ಲಿ ವೇಳೆಯಲ್ಲಿ ಸಿನಿಮಾದಲ್ಲಿ ನಟಿಸುವ ಆಸೆ ತೋರಿಸಿದ್ದು, ಇದೇ ನೆಪದೊಂದಿಗೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇನ್ನು ಈ ವಿಚಾರವನ್ನು ಬಹಿರಂಗಪಡಿಸಿದರೆ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ನಿರ್ದೇಶಕ ಬೆದರಿಸಿದ್ದಾನೆ. ಹೀಗೆ ಆಕೆಯನ್ನು ಬೆದರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದು, ಅಷ್ಟೇ ಅಲ್ಲದೆ ಬಲವಂತವಾಗಿ ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಆದರೆ ಯುವತಿಯು ತನಗಾದ ಮೋಸದ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ನಿರ್ದೇಶಕ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇಲ್ಲಿ ನಿರ್ದೇಶಕನಿಗೆ ಹಿನ್ನಡೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಯುವತಿ ಮೇಲೆ ಎಸಗಿರುವ ಆರೋಪ ಮೇಲ್ನೋಟಕ್ಕೆ ಸಾಭೀತಾಗಿದ್ದು ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶ ಪಡಿಸಿ ಆರೋಪದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಜಾಮೀನು ರದ್ದು ಪಡಿಸಲಾಗಿದೆ. ಇದರ ಬೆನ್ನಲೇ ಪೊಲೀಸರು ಸನೋಜ್ ಮಿಶ್ರಾನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಇನ್ನು ಸನೋಜ್ ಮಿಶ್ರಾ ಈಗಾಗಲೇ ಮೊನಾಲಿಸಾಳ ಫೋಟೋ ಶೂಟ್ ಗಳನ್ನು ನಡೆಸಿದ್ದು, ಆಕೆಯ ಮೇಲೂ ಇಂತಹ ದೌರ್ಜನ್ಯ ನಡೆದಿರಬಹುದು ಎಂದು ಕೆಲವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಕಾರಣಕ್ಕೂ ಯಾವ ಯುವತಿಯರು ಕೂಡ ಸನೋಜ್ ಮಿಶ್ರಾ ಜೊತೆ ಸಿನಿಮಾದಲ್ಲಿ ನಟನೆಯ ಆಸೆ ಇಟ್ಟುಕೊಂಡು ಹೋಗಬೇಡಿ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!