Friday, June 5, 2026
Homeಅಪರಾಧಹಸುವಿನ ಕೆಚ್ಚಲು ಕೊಯ್ದ ಘಟನೆಗೆ ನಿರ್ದೇಶಕ ಪ್ರೇಮ್ ನಿಂದ ತೀವ್ರ ಆಕ್ರೋಶ; ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ...

ಹಸುವಿನ ಕೆಚ್ಚಲು ಕೊಯ್ದ ಘಟನೆಗೆ ನಿರ್ದೇಶಕ ಪ್ರೇಮ್ ನಿಂದ ತೀವ್ರ ಆಕ್ರೋಶ; ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು

- Advertisement -
- Advertisement -

ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದ್ದು, ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು ಎಂದು ಕಿಡಿಕಾರಿದ್ದಾರೆ.

‘ಗೋವನ್ನು ಮಾತೆಯನ್ನು ನಾವು ತಾಯಿ ಎಂದು ಪೂಜಿಸುತ್ತೇವೆ. ಅಂಥಹ ತಾಯಿಯ ಎದೆಯನ್ನ ರಾಕ್ಷಸ ಮನಸ್ಥಿತಿಯ ವ್ಯಕ್ತಿಯೊಬ್ಬ ಕೊಯ್ದಿದ್ದಾನೆ. ಕರ್ನಾಟಕ ಪೊಲೀಸ್ ಸ್ಟ್ರಾಂಗ್ ಇದ್ದಾರೆ. ಅವರನ್ನು ಹಿಡಿದು ತಕ್ಕ ಶಿಕ್ಷೆ ಕೊಡಿಸುತ್ತಾರೆ. ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು. ಆದರೆ ಅವರು ಕೈಗೆ ಸಿಕ್ಕರೇ ಅಲ್ಲೇ ಹೊಡೆದು ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಪ್ರಕರಣದಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!