Monday, June 30, 2025
Homeತಾಜಾ ಸುದ್ದಿಕ್ಷಯರೋಗ ಎಂದು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್: ಮಹಿಳೆಯ ಶ್ವಾಸಕೋಶದಲ್ಲಿತ್ತು ಕಾಂಡೋಮ್

ಕ್ಷಯರೋಗ ಎಂದು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್: ಮಹಿಳೆಯ ಶ್ವಾಸಕೋಶದಲ್ಲಿತ್ತು ಕಾಂಡೋಮ್

spot_img
- Advertisement -
- Advertisement -

ನವದೆಹಲಿ: ಆರು ತಿಂಗಳಿನಿಂದ ನಿರಂತರವಾಗಿ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ದೆಹಲಿ ಶಿಕ್ಷಕಿಯೊಬ್ಬರು ಚಿಕಿತ್ಸೆಗೆ ಅಂತಾ ವೈದ್ಯರ ಬಳಿ ಹೋಗಿದ್ದಾರೆ. ಈ ವೇಳೆ ವೈದ್ಯರು ಕ್ಷಯ ರೋಗದ ಲಕ್ಷಣಗಳಿರೋದರಿಂದ ಶ್ವಾಸಕೋಶದ ಎಕ್ಸರೇ ಮಾಡಿಸುವಂತೆ ತಿಳಿಸಿದ್ದಾರೆ. ಈ ವೇಳೆ ಅವರ ಬಲ ಶ್ವಾಸಕೋಶದಲ್ಲಿ ತಲೆಕೆಳಗಾದ ಚೀಲದಂತಹ ಸಣ್ಣ ವಸ್ತು ಕಂಡು ಬಂದಿದೆ. ಬಳಿಕ  ವೈದ್ಯರು ಆಪರೇಷನ್ ಮಾಡಿ ಅದನ್ನು ಹೊರ ತೆಗಿದ್ದಾರೆ. ಆಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಆ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಸಿಕ್ಕಿ ಹಾಕಿಕೊಂಡಿತ್ತು.

 ನಂತರ ವೈದ್ಯರು ಆಕೆಯನ್ನು ಪ್ರಶ್ನಿಸಿದಾಗ ಮಹಿಳೆ ಮತ್ತು ಪತಿ ಸಂಬೋಗದ ಸಮಯದಲ್ಲಿ ಆದ ಎಡವಟ್ಟಿನಿಂದ ಈ ರೀತಿ ಆಗಿದೆ ಎಂದು ತಿಳಿಸಿದ್ದಾಳೆ . ಮಹಿಳೆ ಕಾಂಡೋಮ್ ಅನ್ನು ತಿಳಿಯದೇ ನುಂಗಿರಬಹುದು ಅಥವಾ ಸಂಕೋಚ ದಿಂದ ಈ ವಿಷಯವನ್ನು ವೈದ್ಯರಿಗೆ ಹೇಳಲಿಲ್ಲ ಎಂಬುದು ವೈದ್ಯರು ಹೇಳಿದ್ದಾರೆ.ಅಲ್ಲದೇ ವೈದ್ಯಲೋಕದಲ್ಲೇ ಇದೊಂದು ಅಚ್ಚರಿಯ ವಿಚಾರ ಎಂದು ಅವರು ಹೇಳಿದ್ದಾರೆ

- Advertisement -
spot_img

Latest News

error: Content is protected !!