Friday, March 29, 2024
Homeಕರಾವಳಿಬಂಟ್ವಾಳ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪರಿಸರ ಪ್ರೀತಿ; ಇಲ್ಲಿದೆ ನೋಡಿ ಅತ್ಯಂತ ಅಪರೂಪದ ಮದುವೆ ಕಾಗದ

ಬಂಟ್ವಾಳ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪರಿಸರ ಪ್ರೀತಿ; ಇಲ್ಲಿದೆ ನೋಡಿ ಅತ್ಯಂತ ಅಪರೂಪದ ಮದುವೆ ಕಾಗದ

spot_img
- Advertisement -
- Advertisement -

ಬಂಟ್ವಾಳ; ನಾವೆಲ್ಲಾ ಬೇರೆ ಬೇರೆ ಡಿಸೈನ್ ಗಳ ಬೇರೆ ಬೇರೆ ರೀತಿಯ ಸಂದೇಶವಿರುವ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡ್ತಾ ಇರ್ತೀವಿ.ಆದರೆ ಇಂತಹ ಮದುವೆ ಕಾಗದವನ್ನು ನೀವು ನೋಡಿರಲು ಸಾಧ್ಯವಿಲ್ಲ. ಇಲ್ಲಿ ಮದುವೆ ಕಾಗದದ ಮೂಲಕವೇ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಗಿದೆ.

ರಾಜಮಣಿ ರಾಮಕುಂಜ ಇವರ ಪುತ್ರಿ ಮೇಧಾರಾಮಕುಂಜ ಅವರ ವಿವಾಹ ರಂಜನ್ ಆಚಾರ್ಯ ಅವರ ಜೊತೆಗೆ ಇದೇ ಡಿಸೆಂಬರ್‌ 14 ರಂದು ಬಿ.ಸಿ.ರೋಡಿನ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ನಡೆಯಲಿದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಪರಿಸರ ಜಾಗೃತಿ ಮೂಡಿಸಲಾಗಿದೆ.

ಮದ್ಬೆ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಮದುಮಗ ಮತ್ತು ಮದುಮಗಳ ಚಿತ್ರವನ್ನು ಮಂಗಳೂರಿನ ಖ್ಯಾತ ಚಿತ್ರ ಕಲಾವಿದ ಭುವನ್ ಮಂಗಳೂರು ಅವರು ಬಿಡಿಸಿದ್ದಾರೆ. ಒಳಗಿನ ಪುಟದಲ್ಲಿ ಹೋಮ ಕುಂಡಲಿ ಇದೆ. ಅದರ ಜತೆಗೆ ‘ನಿಮ್ಮಿಂದ ಗಿಡವಾಗಲಿ’ ಎಂಬ ಬರಹದ ಅಡಿಯಲ್ಲಿ ಬೆಂಡೆಕಾಯಿ, ಬದನೆ, ಹರಿವೆ ಹಲಸಂಡೆ ಬೀಜಗಳ ಪ್ಯಾಕೆಟ್ ಇಟ್ಟಿದ್ದಾರೆ. ಈ ಮೂಲಕ ಕಾಗದ ಸಿಕ್ಕಿದ ಪ್ರತಿ ಮನೆಯಲ್ಲಿಯೂ ಗಿಡವೊಂದು ಮೊಳಕೆಯೊಡೆಯ ಬೇಕು. ಆ ಮೂಲಕ ಮನಪರಿವರ್ತನೆಯಾಗಿ ನಾವು ಪರಿಸರವನ್ನು ಉಳಿಸುವ ಪಣತೊಡ ಬೇಕು ಎಂಬುದೇ ಆಶಯವಾಗಿದೆ.

ಆಮಂತ್ರಣ ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿದ್ದು, ಕೊನೆಯ ಪುಟದಲ್ಲಿ ಪರಿಸರ ಸಂರಕ್ಷಣೆಯ ಬರಹಗಳು ಗಮನ ಸೆಳೆಯುತ್ತವೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ’ ಎಂಬ ತಲೆಬರಹದಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಕಸ ಎಸೆಯಬೇಡಿ ಹೀಗೆ ಅನೇಕ ಪರಿಸರ ಸಂರಕ್ಷಣಾ ವಿಚಾರಗಳನ್ನು ಹೊಂದಿದ ಬರಹ ಇಲ್ಲಿವೆ.

ಜೊತೆಗೆ ಮದುವೆ ಕಾರ್ಯಕ್ರಮದ ಪೌರೋಹಿತ್ಯ ಹಾಗೂ ಪಾಕಶಾಲೆಯ ನೇತೃತ್ವ ವಹಿಸಿದವರ ಹೆಸರು ಕೂಡಾ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂಬ ಮಾಹಿತಿಗಾಗಿ ಮದುವೆಗೆ ಆಗಮಿಸುವ ಸರ್ವರಿಗೂ ಬಟ್ಟೆಯ ಕೈ ಚೀಲವೊಂದನ್ನು ನೀಡಲಾಗುತ್ತದೆ.ಇದರಲ್ಲಿ ರಾಷ್ಟ್ರ ದೇವೋಭವ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ. ಶ್ರೀರಸ್ತು ಶುಭ ಮಸ್ತು ಎಂಬ ಬರಹವನ್ನು ಪ್ರಿಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮದುವೆ ಕಾಗದದ ಮೇಲೆ ಒಮ್ಮೆ ಕಣ್ಣಾಡಿಸಿದ್ರೆ ಸಾಕಷ್ಟು ಮಾಹಿತಿಗಳು ನಮ್ಮದಾಗುವುದಂತು ಪಕ್ಕ.

- Advertisement -
spot_img

Latest News

error: Content is protected !!